ಪ್ರಾರಂಭ ಪದದ ಹುಡುಕು
ಧನಮಂ ಕಂಡ ದರಿದ್ರನಮನದವೊಲೆಅಗಿದವು ಪರಿಜನಂಗಳ ನೊಸಲಾವಿನಯನಿಧಿಗಾ ಕುಮಾರಕನನುರಾಗದೆ ಮಾರಿದತ್ತ ವಿಭುಗಿಂತೆಂದಂ
ಧರಣೀ ಭಾರಕ್ಕೆ ಯಶೋಧರನನೊಡಂಬಡಿಸಿ ನೂರ್ವರರಸುಗಳೊಡನಾದರದಿಂ ಕಂಬಂದಪ್ಪಿದಕರಿಯಂತೆ ತಪೋವನಕ್ಕೆ ನಡೆದನಿಳೇಶಂ
ಧರಣೀಗಣಿಕೆ ಯಶೌಘನವಿರಹದ ಪರಿತಾಪಮಂ ಯಶೋಧರ ಯಶೋಹರಿಚಂದನಚರ್ಜೆಯಿನುTLS ದಾನಾಸಾರಸೇಕದಿಂ ಮಗ್ಗಿಸಿದಳ್
ಧರ್ಮಪರರ್ಗಲ್ಲದೆಮ್ಮಯನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾಧರ್ಮದ ಪೋದ ಪೊಲಂಬದುನರ್ಮದೆಯಿಂ ಗಂಟದೇಕೆ ಕೇಳ್ಬಪೆಯೆಮ್ಮಂ
ಧೀರನಿಧಿ ಬಿಟ್ಟಿದೇವನೊ-ಳೋರಗೆ ಬಲ್ಹಾಳನಿಂತು ನರಸಿಂಹಸುತಂಂ-ಗಾರೆಣೆ ಗಗನಂ ಗಗನಾ-ಕಾರಮೆನಲ್ ತಮ್ಮೊಳೆಣೆ ಪಿತಾಮಹ ಪೌತ್ರರ್.