ಪ್ರಾರಂಭ ಪದದ ಹುಡುಕು

(39) (28) (11) (3) (3) (0) (0) (0) (31) (2) (0) (4) (0) (0) ಅಂ (3) ಅಃ (0) (32) (0) (10) (0) (0) (3) (0) (5) (0) (0) (0) (0) (0) (0) (0) (21) (0) (7) (5) (19) (20) (0) (11) (4) (27) (0) (1) (0) (1) (7) (8) (0) (8) (1) (0)
ಗಂಂಟಿಗೆತ್ತಲ್‌ ತದ್ದನ ಪರಿಸರದೊಳ್‌ ಬರುತಮಿರ್ದಕಂಪನರೆಂಬರ್‌ ತರುಮೂಲದೊಳಿರೆ ನಿಧಿಯಂ ಕುರುಡಂ ಕಾಣ್ಬಂತೆ ಚಂಡಕರ್ಮಂ ಕಂಡಂ
--------------
ಜನ್ನ
ಗಂಗಕುಲಚಕ್ರವರ್ತಿ ಕ- ಳಿಂಂಗಧರಾಧೀಶರಿವರಸಾರಂ ಸಂಸಾ- ರಂ ಗಡಮೆಂದರಣಿದಜೆದು ತ- ಪಂಗೆಯ್ದರ್‌ ನಾಮದಿಂ ಸುದತ್ತಾಚಾರ್ಯರ್‌
--------------
ಜನ್ನ
ಗಣಧರರೋ ಸ್ವಾಮಿಗಳೋ ಗುಣದಿಂದಾಮಖಿಯೆಮೆಣಗಿ ಶುಭ್ರರೆಮೆಮ್ಮಂ ತಣಿಪುಗೆ ಸಮಂತಭದ್ರರ ಗುಣಭದ್ರರ ಪೂಜ್ಯಪಾದರಾಖ್ಯಾನಂಗಳ್‌
--------------
ಜನ್ನ
ಗಹಗಹಿಕೆವಡೆದ ವಹಿಣಿಯ ಸುಹಾಹೆ ರುಂಪೆಯದೊಳಮರೆ ಠಾಯದೊಳಂಂ ನಿ ರ್ವಹಿಸಿ ನೆಲೆಗೊಳಿಸಿ ಬಯ್ಲಿಕೆ ಮಹಚಾಳೆಯದಲ್ಲಿ ಮೂರ್ತಿವಡೆದುದು ರಾಗಂ
--------------
ಜನ್ನ
ಗುಡುಗುಡನೆ ಸುರಿವ ಕಣ್ಣನಿ- ಯೊಡವಂದಶುಭಕ್ಕೆ ಮಂಗಳಸ್ನಾನಮಂ- ದೊಡರಿಸೆ ಸೋದರ ಶಿಶುಗಳ- ನೊಡಲೊಳ್‌ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ
--------------
ಜನ್ನ
ಗುಣಿಗಳ ಗುಣರತ್ನವಿಭೂ- ಷಣಮೆಸೆವುದೆ ವಿಕಳಹೃದಯರಾದವರ್ಗೆ ನೃಪಾ ಗ್ರಣಿ ಪೇಟ್‌ ತುಪ್ಪೇಣಚೆದ ದ ರ್ಪಣದೊಳ್‌ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂಂ.
--------------
ಜನ್ನ
ಗುರುಬಿಟ್ಟ ರಾಜ್ಯಲಕ್ಷ್ಮಿಗೆ ವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್‌ ನೆರೆದಿರ್ಪುದಲ್ಲದೆಂಬಂ ತಿರೆ ಪೋದಳ್‌ ಕೀರ್ತಿಕಾಂತೆ ದೆಸೆಯೆಂತುವರಂ
--------------
ಜನ್ನ
ಗುರುವಿಂತು ಬೆಸಸೆ ಜಾತಿ ಸ್ಮರಂಗಳಾಗಿರ್ದು ಪಕ್ಕಿಗಳ್‌ ಕೇಳ್ಬೆರ್ದೆಯೊಳ್‌ ಪರಮೋತ್ಸವದಿಂ ವ್ರತಮಂ ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂಂ
--------------
ಜನ್ನ
ಗುರುವಿಂದು ಬೆಸಸೆ ಭಿಕ್ಷೆಗೆ ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
--------------
ಜನ್ನ
ಗೋದಾಮೆಗಂಡ ನವಿಲಂ ತಾದುದು ಕಾರ್ಗಂಡ ಹಂಸನವೊಲಾದುದಲರ್‌ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣ್ಮೆಗೆನ್ನಯ ಚಿತ್ತಂ
--------------
ಜನ್ನ
-->