ಪ್ರಾರಂಭ ಪದದ ಹುಡುಕು
ಅರಸನುಮಾಗಳೆ ನೆತ್ತದಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ-ದರೆ ಗೆತ್ತು ಪಿಡಿದುದೆಂಬಾ-ಚರಿ ಕುಕ್ಕರಿ ನೊಂದು ಬೀಟ್ವ ನಂದನಚರನಂ
ಅರಸಾದಂ ಸಂವರಣೆಗೆಪರರಾಷ್ಟಂ ಗಂಗವಾಡಿ ತೊಂಬತ್ತಜು ಸಾ-ಸಿರಮಂ ಬ್ರಹ್ಮಣದತ್ತಿಗೆವರಸಪ್ತಮ ಚಕ್ರವರ್ತಿ ವಿಷ್ಣುನೃಪಾಲಂ
ಅಲ್ಲಿಯೆ ಪೋಂತಪ್ಪದುವುದುಮೆಲ್ಲನೆ ತೆನೆ ತೀವಿ ಸುಟಿಯೆ ಕಂಡೊರ್ಮೆ ಮಹೀವಲ್ಲಭನುಂ ಬೇಂಟೆಯೊಳಡ-ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ
ಅಳವಡೆ ಭುಜದೊಳ್ ಮೃಗಮದತಿಳಕದವೊಲ್ ಸಕಲಧರಣಿ ಯೌವನ ಭೂಪಾವಳಿಯನೆ ತಿರ್ದುವನಾ ನೃಪಕುಳಶೇಖರನಮೃತಮತಿಯ ಮುಖದರ್ಪಣಗೊಳ್
ಅಳಿಪುಳ್ಳೊಡೆ ನೊಡಿಜುದೊಡನಟೆವುದೆ ಪೆಣ್ ತಪ್ಪಿ ನಡೆಯ ಚಿಃ ಕಿಸುಗುಳಮೆಂದುಃಖಖವುದೆ ಗೆಲ್ಲಂ ಗೊಂಡಾಪುಟು ಪುಟ್ಟುವ ನರಕದೊಳಗೆ ಬೀಟ್ವನೆ ಚದುರಂ
ಅವಧಾರಿಸಿ ಕೇಲ್ವುದುಮದರವಧಿಯಿನಾಸನ್ನಭವ್ಯನೆಂಬುದನಣೆದಿಂ-ತವರಿಂತು ನುಡಿದರಾತ್ಮನ-ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
ಅವನಿಪನೊರ್ಮೆ ಸಭಾಮಣಿಭವನದಿನಂಬರ ತರಂಗಿಣೀ ಪುಳಿನಮನೇಟುವ ಹಂಸನಂತೆ ಶಯ್ಯಾಧವಳ ಪ್ರಾಸಾದ ತಳಮನೇಅದನರಸಾ
ಅವರ ಗುಣಮವರ ಸಂಯಮ-ಮವರ ತಪಶ್ಚರಣಮೆಂಬುದವರಿವರಳವಲ್ಲವರ ಪೆಸರ್ಗೊಂಡ ನಾಲಗೆಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ
ಅಸಿಲತೆ ರಣಧೌತಮದೀಸಿಮುಸಡನ ಜೀವಕಪ್ಪಿನಂ ಕಂದಿದೊಡೆಸೆಯನಡರ್ದೆನ್ನ ಕೀರ್ತಿಸರದ ಕುಡಿ ಕಯ್ದೆ ಸೂರೆಯ ಕುಡಿಯವೊಲಕ್ಕುಂ