ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
ಮುಟ್ಟಿದೊಡೆ ಸುಖದ ಸೋಂಕಂ ಪುಟ್ಟಿಸುವಾ ವಾಮೆಯಾದೊಡೆ ಮುನ್ನಂ ಬಟ್ಟಿದುವೆನಿಸುವ ಮೊಲೆ ನಿ ರ್ವೆಟ್ಟಿದುವಾದುವು ನೃಪಂಗೆ ಬೆನ್ನೋಂಕಲೊಡಂ
--------------
ಜನ್ನ
ಸಜ್ಜನ ಚೂಡಾಮಣಿ ತ- ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ- ಗುಜ್ಜಳಿಕೆವಡೆದ ಪೆರ್ಮೆಯೊ ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
--------------
ಜನ್ನ
-->