ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇತಿಹಾಸಮೆಂಬ ವಿಮಳಾ- ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ- ನ್ವಿತಮಾಗಿರೆ ಕಥೇ ಬುಧಸಂ- ತತಿಗಕ್ಷಯ ಸುಖಮನೀವುದೊಂಂದಚ್ಚರಿಯೇ
--------------
ಜನ್ನ
ಕಡೆಗಣ್ಗಳ್‌ ಕೇದಗೆಯಂ ಪಡೆದುವು ಮಲ್ಲಿಗೆಗೆ ಸೆಳ್ಳುಗುರ್‌ ಸಂಂಪಗೆಯಂ ಪಡೆದುವು ಪಾದರಿಗೆನೆ ಸಂ- ಗಡರಿಂಂದಲರ್ಗೊಯ್ವ ವಾರವನಿತೆಯರೆಸೆದರ್‌
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ತಮದಿಂದಂ ಪೊಅಮಟ್ಟು- ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ- ಯಮದೆ ಸುದತ್ತಾಚಾರ್ಯರ ಸಮುದಾಯದೊಳಿರ್ದು ತತ್ವಪರಿಣತನಾದಂ
--------------
ಜನ್ನ
-->