ಒಟ್ಟು 14 ಕಡೆಗಳಲ್ಲಿ , 1 ಕವಿಗಳು , 14 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಜೆಂ ತನ್ನಂತಿರೆ ಬಗೆ- ವುದು ಪೆಆರಂ ಪ್ರಾಣಿಹಿಂಸೆಯಂ ಮಾಡಲ್ವೇ- ಡ ದಯಾಮೂಲಂ ಧರ್ಮಂ ಪದುಳಿಸಿ ಕೇಳ್‌ ಮಗನೆ ಹಿತಮಿದುಭಯಭವಕ್ಕಂ
--------------
ಜನ್ನ
ಅದಲೂಳಗೆ ಮೆಖೆವ ಮಣಿ ಮಾ- ಡದ ಲೋವೆಗಳಲ್ಲಿ ಕೋದ ಪೊಸಮುತ್ತಿನ ಮೊ ತ್ತದೆ ಬೆಳಗು ಚಂದನಾಲೇ- ಪದ ಪವನಂ ಕುಡುವುದುರಿವ ರವಿಗೆಡೆವಗಲೊಳ್‌
--------------
ಜನ್ನ
ಅಲ್ಲಿಯೆ ಪೋಂತಪ್ಪದುವುದು ಮೆಲ್ಲನೆ ತೆನೆ ತೀವಿ ಸುಟಿಯೆ ಕಂಡೊರ್ಮೆ ಮಹೀ ವಲ್ಲಭನುಂ ಬೇಂಟೆಯೊಳಡ- ಗಿಲ್ಲದೆ ಬರುತೆಚ್ಚನಿದಿರೊಳಜಗರ್ಭಿಣಿಯಂ
--------------
ಜನ್ನ
ಅವಧಾರಿಸಿ ಕೇಲ್ವುದುಮದ ರವಧಿಯಿನಾಸನ್ನಭವ್ಯನೆಂಬುದನಣೆದಿಂ- ತವರಿಂತು ನುಡಿದರಾತ್ಮನ- ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
--------------
ಜನ್ನ
ಆವೆಡೆಯೊಳಿರ್ದನಾತ್ಮಂ ಗಾವುದು ಕುಜುಪೆಂಂದೊಡಂಗಿಯಂಗದೊಳೆಲ್ಲಂ ತೀವಿರ್ಪಂ ಭೂತಚತು- ಷ್ಟಾವಯವದಿನನ್ಯ ನಾತ್ಮನತಿಚೈತನ್ಯಂ
--------------
ಜನ್ನ
ಎಂದಾಕೆಗೆ ಲಂಚಮನಿ ತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್‌ ಸಂದಿಸಿದೊಡಮೃತಮತಿ ರಾ ತ್ರಿಂ ದಿವಮಾತನೊಳೆ ಸಲಿಸಿದಳ್‌ ತೆಜಪುಗಳಂ
--------------
ಜನ್ನ
ಕಜ್‌ದೊವಲ ಪಟಿಯ ಕಟಿಯಂ ತೆದಂದದ ಮೆಯ್ಯ ನಾತಮಾತನ ಕಯ್ಗಳ್‌ ಕುಜುಗಣ್ಣು ಕೂನಬೆನ್‌ ಕಾಲ್‌ ಮಂ*ಯಿಸುವುದು ಟೊಂಕಮುಖಿದ ಕತ್ತೆಯ ಕಾಲಂ
--------------
ಜನ್ನ
ಕೇವಲ ವಿಬೋಧನೇತ್ರನೆ ದೇವನೆ ಪರಮಾತ್ಮನಾಗಮಂ ತದ್ವಚನಂ ಜೀವದಯೆ ಧರ್ಮಮೆಂಬೀ ಭಾವನೆಯಂ ನೇಖೆಯೆ ನಂಬುವುದು ಸಮ್ಯಕ್ತ್ವಂ
--------------
ಜನ್ನ
ಚಲದ ಬಲದೆಸಕದಿಂ ಸಲೆ ನಿಲೆ ನಾಲ್ಕುಂ ದೆಸೆಯ ಮೂಜುವರೆ ರಾಯರ ಮುಂಂ- ದಲೆಯೊಳಗುಂದಲೆಯೆನೆ ನಿಂ- ದಲೆವುದು ತೇಜಂ ಪ್ರತಾಪ ಚಕ್ರೇಶ್ವರನಾ
--------------
ಜನ್ನ
ಪರನೃಪರ ರಾಜ್ಯಲಕ್ಷ್ಮಿಯ ಕುರುಳಾಕರ್ಷಣದೆ ನೀಳ್ಬ ತೋಳ್‌ ಮೆಉೌವುದು ಪೇ ರುರದೊಳ್‌ ನೆಲಸಿದ ಲಕ್ಷ್ಮಿ ಕರಿಣಿಗೆ ಬಾಳಿಸಿದ ರನ್ನದಮಳ್ಗಂಬದವೊಲ್‌
--------------
ಜನ್ನ
ಪರೆವುದು ದುರಿತತಮಿಸ್ರಂ ಪೊರೆಯೇಜುದಮಳದೃಷ್ಟಿಕುವಳಯ ವನಮಾ- ಚರಿಪ ಜನಿಕ್ಕೆ ಯಶೋಧರ ಚರಿತ ಕಥಾಶ್ರವಣಮೆಂಂಬ ಚಂದ್ರೋದಯದೊಳ್‌
--------------
ಜನ್ನ
ಪ್ರಜೆಯೆಲ್ಲಂ ಜಲಗಂಧ ವ ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ ವ್ರಜದಿಂ ಪೂಜಿಸುವುದು ಜೀ- ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ
--------------
ಜನ್ನ
ಶೀರ್ಷಾಭರಣಮೆಂಂಬ ಧರೆಗು- ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್‌ ರಾಜಪುರಂ
--------------
ಜನ್ನ
ಸಳನೆಂಬ ಯಾದವಂ ಹೊಯ್‌ ಸಳನಾದಂ ಶಶಕಪುರದ ವಾಸಂತಿಕೆಯೊಳ್‌ ಮುಳಿದು ಪುಲಿ ಪಾಯ್ವುದುಂ ಹೊಯ್‌ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
--------------
ಜನ್ನ
-->