ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ಮನಸಂದು ಜಿನಮತ ನಂದನದೊಳ್‌ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸ- ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
--------------
ಜನ್ನ
ಜನಕಂ ಯಶೋಧರಂ ಪಿ- ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ- ಡಿನ ಪೋರಿ ಪೋಂತು ಕುಕ್ಕುಟ- ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
--------------
ಜನ್ನ
ತಾರಾತಾರಾ ಧರಾಧರ ತಾರಾ ದರತಾಹಾರ ನೀಹಾರ ಪಯಃ ಪೂರ ಹರಹಸನ ಶಾರದ ನೀರದ ನಿರ್ಮಲ ಯಶೋಧರಂಂ ಕವಿತಿಲಕಂ
--------------
ಜನ್ನ
ಪೊಡೆಯೆ ಕೃಕವಾಕು ನಿನದಂ ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಟೆರೆ ಪೊಯ್‌ ವಡೆದಂತೆ ಪಂದೆಯಂ ಪಾ- ವಡರ್ದಂತಾಗಿರೆ ಯಶೋಧರಂ ಬೆರಗಾದಂ
--------------
ಜನ್ನ
ಮತ್ತಂ ಧರ್ಮವಿಹಾರ ನಿ- ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳ್ಬು ಸು- ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
--------------
ಜನ್ನ
ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
-->