ಒಟ್ಟು 30 ಕಡೆಗಳಲ್ಲಿ , 1 ಕವಿಗಳು , 27 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿತೆಸೆವ ಚಂದ್ರಮತಿಗಂ ಜನಪತಿಗಂ ಪುಟ್ಟಿದಂ ಯಶೋಧರನೆಂಬಂ ಜನಮೋಹನಬಾಣಂ ಕ ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್‌
--------------
ಜನ್ನ
ಅಭಯರಚಿಯಭಯಮತಿಯಿೆಂ ಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್‌ ಶುಭಲಕ್ಷಣಮಷ್ಪತ್ತಿರೆ ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
--------------
ಜನ್ನ
ಅಮೃತಮತಿ ಗಡ ಯಶೋಧರ ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ ಸುಮನೋಬಾಣಂ ತದ್ಭೂ ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ
--------------
ಜನ್ನ
ಆ ವಿಪ್ರಘೋಷಣಂಂ ಸ್ಮೃತಿ ಗಾವಹನ ನಿದಾನಮಾದವೋಲಜ Waeso ಭಾವಿಸಿದುದಾನ್‌ ಯಶೋಧರ ದೇವನೆ ಎನ್ಮಾತ್ಮಜಂ ಯಶೋಮತಿಯೀತಂ
--------------
ಜನ್ನ
ಆಗಳ್‌ ತಂದೆಯ ತಪದು- ದ್ಯೋಗಂ ತಡವಾಗದಂತೊಡಂಬಟ್ಟು ಮಹೀ ಭೋಗಕ್ಕನುಜ ಯಶೋಧರ ನಾಗಿರೆ ಬಟೆಕಭಯರುಚಿಯುಮನುಜೆಯ ಸಹಿತಂ
--------------
ಜನ್ನ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂ ಜನ್ನಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ ಸಂಪೂರ್ಣಂ
--------------
ಜನ್ನ
ಎಂದು ಮನಸಂದು ಜಿನಮತ ನಂದನದೊಳ್‌ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸ- ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
--------------
ಜನ್ನ
ಎನೆ ಮುನಿವಚನದೊಳಂ ನಂ- ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ- ಳ್ಮನೆ ತಿಳಿದು ಭಾಷು ಸಂಕ- ಲನ ವಧೆಗಿನಿತಾಯ್ತು ದಿಟದಿನೇನೇನಾಗರ್‌
--------------
ಜನ್ನ
ಎಳವೆಳ್ಳಿಂಂಗಳ್‌ ನನೆಗಣೆ ಮಳಯಾನಿಳನಿಲ್ಲಿ ಮೂವರೊಳಗಾರೊ ಕುತೂ- ಹಳಮಾದಪುದೆನ್ನದ ಕ- ಣ್ಹೊಳವೆ ಯಶೋದಧರಕುಮಾರನಂ ಕಾಣಲೊಡಂ
--------------
ಜನ್ನ
ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ- ದೆರ್ಮೆಯ ಪೋರಿಯನಿಕ್ಕಿದ- ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ
--------------
ಜನ್ನ
ಕರಹಟದೊಳ್‌ ಬೇಂಟೆಯ ಕು- ಕ್ಯುರಿಯಾದಳ್‌ ಸತ್ತು ಚಂದ್ರಮತಿಯುಂ ಬಟೆಕಾ- ಯೆರಡುಮುಪಾಯನ ಘಟನೆಯಿ- ನರಮನೆಯಂ ಸಾರ್ದುವಾ ಯಶೋಧರಸುತನಾ
--------------
ಜನ್ನ
ಗುರುಬಿಟ್ಟ ರಾಜ್ಯಲಕ್ಷ್ಮಿಗೆ ವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್‌ ನೆರೆದಿರ್ಪುದಲ್ಲದೆಂಬಂ ತಿರೆ ಪೋದಳ್‌ ಕೀರ್ತಿಕಾಂತೆ ದೆಸೆಯೆಂತುವರಂ
--------------
ಜನ್ನ
ಜನಕಂ ಯಶೋಧರಂ ಪಿ- ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ- ಡಿನ ಪೋರಿ ಪೋಂತು ಕುಕ್ಕುಟ- ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
--------------
ಜನ್ನ
ತರಿಸಿ ಪರಿಶುದ್ದಿ ಗೆಯ್ದದ- ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ- ಧರ ಚಂದ್ರಮತಿಗಳೊಸೆದು- ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್‌
--------------
ಜನ್ನ
ತಾರಾತಾರಾ ಧರಾಧರ ತಾರಾ ದರತಾಹಾರ ನೀಹಾರ ಪಯಃ ಪೂರ ಹರಹಸನ ಶಾರದ ನೀರದ ನಿರ್ಮಲ ಯಶೋಧರಂಂ ಕವಿತಿಲಕಂ
--------------
ಜನ್ನ
-->