ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತು ದೊರೆವೆತ್ತು ಬಂದ ವ ಸಂತದೊಳಾ ಮಾರಿದತ್ತನುಂ ಪುರಜನಮುಂ ತಂತಮಗೆ ಚಂಡಮಾರಿಗೆ ಸಂತಸಮಂಂ ಮಾಡಲೆಂದು ಜಾತ್ರಗೆ ನೆರೆದರ್‌..
--------------
ಜನ್ನ
ಆ ರಾಜಕುಮಾರಂ ಬಟೆ ಕಾ ರೂಪಿನ ಪೆಂಡಿರಿಂತು ಕಟೆಬಾದೊಡೆ ಚಿಃ ಕೂರಿಸುವ ಕೂರ್ಪ ಮಾತಂಂ ಮಾರಿಗೆ ಕುಡು ಸಿರಿಯನೊಟ್ಟಿ ಸುಡು ಹೋಗೆಂಂದಂ
--------------
ಜನ್ನ
ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ- ದೆರ್ಮೆಯ ಪೋರಿಯನಿಕ್ಕಿದ- ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ
--------------
ಜನ್ನ
-->