ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಣ್ಣನ ಮಾತಂ ಮನದೊಳ್‌ ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ ವುಣ್ಣದೆ ಪೋಕುಮೆ ಭಯಮೇ ಕಣ್ಣ ಭವಪ್ರಕೃತಿ ವಿಕೃತಿ ನಾವಣದುದೇ
--------------
ಜನ್ನ
ಆ ಗಂಡನನಪ್ಪಿದ ತೋಳ್‌ ಪೋಗಂಡನನಪ್ಪುವಂತೆ ಮಾಡಿದ ಬಿದಿಯಂ ಮೂಗಂಂ ಕೊಯ್ಬಿಟ್ಟಿಗೆಯೊಳ್‌ ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ
--------------
ಜನ್ನ
ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂ ಜನ್ನಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ ಸಂಪೂರ್ಣಂ
--------------
ಜನ್ನ
ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ- ಜಿನ ಲಡ್ಡುಗೆಯಂ ಮಾಡಿದು- ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ
--------------
ಜನ್ನ
ಕ್ಷಿತಿಯೋಳ್‌ ಸಂಸ್ಕೃತದಿಂ ಪ್ರಾ- ಕೃತದಿಂ ಕನ್ನಡದಿನಾದ್ಯರಾರ್‌ ಈ ಕೃತಿಯಂ ಕೃತಿಮಾಡಿದರವರ್ಗಳ ಸನ್‌ ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್‌
--------------
ಜನ್ನ
ಬೇಡಿದ ಕಾಡೊಳ್‌ ಮಲೆವೆಯಾ ಯ್ತೀಡಾಡುವಮಿದಆ ಪೊೌಯನೆನಗಂ ನಿನಗಂ ಮೂಡುವ ಮುಖುಗುವ ದಂದುಗ- ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
--------------
ಜನ್ನ
ಮಾಡದೊಡೆ ತಾಯ್ಗೆ ಮರಣಂ ಮಾಡಿದೊಡೆನ್ಕೊಂದು ಗತಿಗೆ ಕೇಡಿಂದೇನಂ ಮಾಡುವೆನೆಂದಾಂದೋಳಮ ನಾಡೆ ಮನಂ ತಮಮನಪ್ಪು ಕಯ್ದ ನಿಳೇಂ
--------------
ಜನ್ನ
ಮಾಡಿದ ಕೋಚೆಯನಜೆದ- ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್‌ ಗೂಡಿನ ಕೋಣಚೆಗಳಾದರ್‌ ನೋಡಯ್‌ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್‌
--------------
ಜನ್ನ
ವಾಣೀ ಪಾರ್ವತಿ ಮಾಡಿದ ಜಾಣೆಂತುಟೊ ಭಾಳಲೋಚನಂ ಕವಿಸುಮನೋ- ಬಾಣನ ಮಗನೆಂದಖಿಳ ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ
--------------
ಜನ್ನ
-->