ಒಟ್ಟು 80 ಕಡೆಗಳಲ್ಲಿ , 1 ಕವಿಗಳು , 70 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂತು ದೊರೆವೆತ್ತು ಬಂದ ವ ಸಂತದೊಳಾ ಮಾರಿದತ್ತನುಂ ಪುರಜನಮುಂ ತಂತಮಗೆ ಚಂಡಮಾರಿಗೆ ಸಂತಸಮಂಂ ಮಾಡಲೆಂದು ಜಾತ್ರಗೆ ನೆರೆದರ್‌..
--------------
ಜನ್ನ
ಅಂತೊಗೆದು ಮೊಟ್ಟೆಯೊಡೆದ- ಲ್ಲಿಂ ತೊಲಗದು ತುಪ್ಪುಚೆಡದು ಕಾಲ್ಪಲಿಯದು ಕ- £90 ತೆಳೌಯದೆಂಬ ಪದಕೆ ಕೃ- ತಾಂಂತನ ಹರಿಯಂತೆ ಕವಿದು ಬೇಂಟೆಯೊಳೊರ್ವಂ
--------------
ಜನ್ನ
ಅಡಸಿದ ನಲ್ಲಳ ತಪ್ಪಂ ತಡವಿಕ್ಕಿದೊಡೇಟು ಭವದ ಕೇಡಡಸುವ ಕಿಟ್‌ ನುಡಿಯಂ ನುಡಿದಳ್‌ ತಾಯೊಂ ದಡಸಿದೊಡೇಅಡಸಿತೆಂಬ ನುಡಿ ತಪ್ಪುಗುಮೇ
--------------
ಜನ್ನ
ಅದಣಡಗು ಮುಗ್ಗಿ ಪುಟೆ ಪ- ತ್ತಿದೊಡಾಅಲ್‌ ಪರಪೆ ಕಾಗೆಯುಂ ನಾಯುಂ ಮು- ಟ್ವಿದೊಡದನೆ ಶುದ್ಧಮಂ ಮಾ- ಟ್ಟುದನಿಂತೆಂದೋದಿದರ್‌ ಪುರೋಹಿತರೆಲ್ಲಂ
--------------
ಜನ್ನ
ಅನಿತೆಸೆವ ಚಂದ್ರಮತಿಗಂ ಜನಪತಿಗಂ ಪುಟ್ಟಿದಂ ಯಶೋಧರನೆಂಬಂ ಜನಮೋಹನಬಾಣಂ ಕ ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್‌
--------------
ಜನ್ನ
ಅಮೃತಮತಿ ಗಡ ಯಶೋಧರ ನ ಮನಃಪ್ರಿಯೆಯಾಕೆ ದೀವಮಾಗೆ ಪುಳಿಂದಂ ಸುಮನೋಬಾಣಂ ತದ್ಭೂ ರಮಣನನೊಲಿದಂತೆ ಗೋರಿಗೊಳಿಸುತ್ತಿರ್ಕುಂ
--------------
ಜನ್ನ
ಅಳಿಪುಳ್ಳೊಡೆ ನೊಡಿಜುದೊಡ ನಟೆವುದೆ ಪೆಣ್‌ ತಪ್ಪಿ ನಡೆಯ ಚಿಃ ಕಿಸುಗುಳಮೆಂ ದುಃಖಖವುದೆ ಗೆಲ್ಲಂ ಗೊಂಡಾ ಪುಟು ಪುಟ್ಟುವ ನರಕದೊಳಗೆ ಬೀಟ್ವನೆ ಚದುರಂ
--------------
ಜನ್ನ
ಅವನಿಪನೊರ್ಮೆ ಸಭಾಮಣಿ ಭವನದಿನಂಬರ ತರಂಗಿಣೀ ಪುಳಿನಮನೇ ಟುವ ಹಂಸನಂತೆ ಶಯ್ಯಾ ಧವಳ ಪ್ರಾಸಾದ ತಳಮನೇಅದನರಸಾ
--------------
ಜನ್ನ
ಆ ಕಥೆ ಮತ್ತೆಂತೆಂದೊಡಿ ಳಾಕಾಂತೆಗವಂತಿ ವಿಷಯಮಾಸ್ಕದವೊಲ್‌ ಶೋ ಭಾಕರಮಾಯ್ತದಯೊಳ್‌ ನಾ ಸಾಕುಟ್ಮಳದಂತೆ ಮೆಜೌಪುದುಜ್ಜೇನಿಪುರಂ
--------------
ಜನ್ನ
ಆ ಗಂಡನನಪ್ಪಿದ ತೋಳ್‌ ಪೋಗಂಡನನಪ್ಪುವಂತೆ ಮಾಡಿದ ಬಿದಿಯಂ ಮೂಗಂಂ ಕೊಯ್ಬಿಟ್ಟಿಗೆಯೊಳ್‌ ಪೋಗೊರಸದೆ ಕಂಡೆನಾದೊಡೇಂ ಬಿಟ್ಟಪೆನೇ
--------------
ಜನ್ನ
ಆ ಪುರದ ತೆಂಕವಂಕದೊ- ಳಾಪೊತ್ತಮನೇಕ ಜೀವಹತಿ ತನಗೆ ಸುಖೋ- ದ್ವೀಪನಮೆನಿಸುವ ಪಾಪಕ- ಳಾಪಂಡಿತೆ ಚಂಡಮಾರಿದೇವತೆಯಿರ್ಪಳ್‌
--------------
ಜನ್ನ
ಆ ಪುರದರಸಂ ನತಭೂ ಮೀಪಾಲರ ಮಕುಟಮಸ್ತಕದೆ ನಿಜಶೇಜೋ ರೂಪಕಮೆ ಪದ್ಮರಾಗದ ದೀಪದವೊಲ್‌ ಮೆಉ್‌ೌವಿನಂ ಯಶೌಘಂ ಮೆಲೌವಂ.
--------------
ಜನ್ನ
ಆ ರೌದ್ರಹತಿಗೆ ತವೆ ಸಂ ಸಾರಂ ತತ್ಪುರದ ಪೊಟಗೆ ಪುಟ್ಟಿದುವಂತಾ ಸೈರಿಭಮುಂ ಪೋಂತುಂ ಪೊಲ- ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಉಳ್‌
--------------
ಜನ್ನ
ಆ ವಿಂಧ್ಯನಗರದೊಳಾ ನಾಯ್‌ ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌ ಪಾವಂ ಪಗೆಮಿಗೆ ತಿಂದುದು ಬಲ್‌ ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
--------------
ಜನ್ನ
ಆಸನದಿಂ ಬಾಯಿಂಂ ಪೊಯ್‌ ಸಾಸವೆ ಮೆಣಸುಪ್ಪು ಗೂಡಿ ನಿಲವಿನ ಸೂಡಿಂ ಲೇಸಾಗಿ ಬೆಂದ ಬಾಡಂ ಬಾಸಣಿಸಿಟ್ಟದನೆ ಅಮೃತಮತಿಗಟ್ಟಿಸಿಡಂ
--------------
ಜನ್ನ
-->