ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನ ಕೆಲಬಲದವರ್ಗಳ್‌ ಪರಸಿರೆ ಪರಸಿರೆ ನ್ಯಪೇಂದ್ರನಂ ನೀವೆನೆ ಮಂ- ದರಧೀರನಭಯರುಚಿ ನೃಪ ವರ ನಿರ್ಮಲಧರ್ಮದಿಂದೆ ಪಾಲಿಸು ಧರೆಯಂ
--------------
ಜನ್ನ
ಎಂದು ಪರಸಿದೊಡೆ ಪೊಯ್ಯದೆ ನಿಂದು ನೃಪಂ ಮನದೊಳೆಂದನೀ ದೇಗುಲಮಂ ಬಂದು ಪುಗಲೊಡನೆ ಜೀವಂ ನಿಂದಖಿಯದು ಮುನ್ನಮಿನ್ನರಂ ಕಂಡಖಿಯೆಂ
--------------
ಜನ್ನ
ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ- ದೆರ್ಮೆಯ ಪೋರಿಯನಿಕ್ಕಿದ- ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ
--------------
ಜನ್ನ
ಕರಮೆಸೆಯೆ ಸಮೆದು ಬಂದುದು ಚರಣಾಯುಧಮದಳಣ ಚಿತ್ರಪರಿಶೋಭೆಗೆ ಬೆಂ ತರನೊಂದಾಶ್ರಯಿಸಿರ್ದುದು ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ
--------------
ಜನ್ನ
-->