ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 9 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನ್‌ ಬೆಂದೆನೆಂದು ನವಿಲಂ ಪಾಣ್ಟೆ ಕನಲ್ಪಡಸಿ ಪೊಯ್ಯೆ ಮೇಗಣ ನೆಲೆಯಿಂ ದಂ ಬಿರ್ದುದು ಪಚ್ಚೆಯ ಪದ- ಕಂ ಬೀಟ್ವಂತಿರೆ ಸುಧಾಂಶುಬಿಂಬದ ಕೊರಲಿಂ
--------------
ಜನ್ನ
ಈ ನಗರಿಯಪ್ಪುದೆಮ್ಮು- ಜ್ಹೇನಿ ಇದಾನಿರ್ಪ ನೆಲೆಯ ದವಳಾರಮಿದುಂ ತಾನಮೃತಮತಿಯ ಮಾಡಂ ಮಾನಿನಿ ನಂಜಿಟ್ಟಳೆನಗೆ ಮುಡಿಪಿದೆನಿದಖೊಳ್‌
--------------
ಜನ್ನ
ಎಲೆ ದೇವರೆ ಪುತ್ತುಂ ಬ- ತ್ತಲೆಯುಂ ಬಣೆದಿಲ್ಲದೆಂಬರದು ಕಾರಣದಿಂ ನೆಲೆಯಾಂದೆಗನಚ್ಚಿಯವೋ- ಲೆಲೆಮಿಡುಕದೆ ನೆನೆಯುತಿರ್ದಿರೇನಂ ಮನದೊಳ್‌
--------------
ಜನ್ನ
ಕಾರಿರುಳೊಳಮೆಳವಿಸಿಲಂ ಪೂರಂ ಪರಿಯಿಪುವು ಬೀದಿಯೊಳ್‌ ನಿಜರುಚಿಯಿಂ ಹೀರೆಯ ಹೂವಿನ ಬಣ್ಣದ ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್‌
--------------
ಜನ್ನ
ಕೆಲಕಾಲಮುಗ್ರತಪಮಂ ಸಲಿಸಿ ಸಮಾಧಿಯೊಳೆ ಮುಡಿಪಿ ಮೂಣನೆಯ ದಿವಂ ನೆಲೆಯಾಗೆ ಮಾರಿದತ್ತಂ ಕಲಿಯಂ ಮೂದಲಿಸಿದಂತೆ ದೇವನೆ ಆದಂ
--------------
ಜನ್ನ
ಗಹಗಹಿಕೆವಡೆದ ವಹಿಣಿಯ ಸುಹಾಹೆ ರುಂಪೆಯದೊಳಮರೆ ಠಾಯದೊಳಂಂ ನಿ ರ್ವಹಿಸಿ ನೆಲೆಗೊಳಿಸಿ ಬಯ್ಲಿಕೆ ಮಹಚಾಳೆಯದಲ್ಲಿ ಮೂರ್ತಿವಡೆದುದು ರಾಗಂ
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ನೆಲೆಮಾಡದೊಳೆಡೆಯಾಡುವ ಕಲಹಂಸಾಲಸವಿಳಾಸವತಿಯರ ಮುಖಮಂಂ- ಡಲಕೆ ಸರಿಯಾಗಲಾಣದೆ ಸಲೆ ಮಾಟ್ಟಂ ಚಂದ್ರನಿಂತು ಚಾಂದ್ರಾಯಣಮಂ
--------------
ಜನ್ನ
ಭಲರೆ ನೃಪೇಂಂದ್ರಾ ದಯೆಯೊಳ್‌ ನೆಲೆಗೊಳಿಸಿದೆ ಮನಮನಮಮ ನೀನ್‌ ಕೇಳ್ದುದು ಸ ತ್ಫಲಮಾಯ್ತು ಧರ್ಮಪಥದೊಳ್‌ ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
--------------
ಜನ್ನ
-->