ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ವಿಂಧ್ಯನಗರದೊಳಾ ನಾಯ್‌ ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌ ಪಾವಂ ಪಗೆಮಿಗೆ ತಿಂದುದು ಬಲ್‌ ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
--------------
ಜನ್ನ
ತವಗಂಂಜುವವರ್ಗೆ ತಾವಂ ಜುವರೆಂಜಲನಾಯ್ಬು ತಿಂಬರೆಂಜಲ ತಾವ್‌ ತಿಂ ಬವನಿಪರಾದಲ್ಲಿಯೆ ನಾಯ್‌ ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ
--------------
ಜನ್ನ
ಬಸಿದಪುದು ಮೆಯ್ಯ ರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್‌ ಬಸನಿಗತನಮಂ ಮಾಣ್ಬೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
--------------
ಜನ್ನ
ಮತ್ತೆ ನೃಪಂ ನಾಯ್‌ ತಿಂದ ದು ನೃತ್ಯಚಮತ್ಕ್ಯಾರನಂ ಮಯೂರನನೆಂದಾ ನೆತ್ತದ ಮಣೆಯಿಂದಿಣೆದೊಡೆ ನೆತ್ತಿ ಪಿಸುಳ್ಳತ್ತು ಸತ್ತುವಂತಾ ಎರಡುಂ
--------------
ಜನ್ನ
-->