ಒಟ್ಟು 24 ಕಡೆಗಳಲ್ಲಿ , 1 ಕವಿಗಳು , 22 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದನವರವಧಿಯಿನಜೆದಾ- ಗದು ಬೇಡನೆ ನೃಪತಿ ಮತ್ತೆ ವಿಸ್ಮಯದಿಂ ಕೇಡ ಳ್ರುದುಮುಸಿರ್ದರ್‌ ಭವದೊಳ್‌ ಬ ರ್ದಿದ ಮಾತರಪಿತರರಂ ಪಿತಾಮಹರಿರವಂ
--------------
ಜನ್ನ
ಅರಸನುಮಾಗಳೆ ನೆತ್ತದ ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ- ದರೆ ಗೆತ್ತು ಪಿಡಿದುದೆಂಬಾ- ಚರಿ ಕುಕ್ಕರಿ ನೊಂದು ಬೀಟ್ವ ನಂದನಚರನಂ
--------------
ಜನ್ನ
ಅವಧಾರಿಸಿ ಕೇಲ್ವುದುಮದ ರವಧಿಯಿನಾಸನ್ನಭವ್ಯನೆಂಬುದನಣೆದಿಂ- ತವರಿಂತು ನುಡಿದರಾತ್ಮನ- ನವಿಕಲ್ಪಂ ನೆನೆಯುತಿರ್ದೆವೆನೆ ಮತ್ತಾತಂ
--------------
ಜನ್ನ
ಆ ವಿಂಧ್ಯನಗರದೊಳಾ ನಾಯ್‌ ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌ ಪಾವಂ ಪಗೆಮಿಗೆ ತಿಂದುದು ಬಲ್‌ ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
--------------
ಜನ್ನ
ಆನ್‌ ಬೆಂದೆನೆಂದು ನವಿಲಂ ಪಾಣ್ಟೆ ಕನಲ್ಪಡಸಿ ಪೊಯ್ಯೆ ಮೇಗಣ ನೆಲೆಯಿಂ ದಂ ಬಿರ್ದುದು ಪಚ್ಚೆಯ ಪದ- ಕಂ ಬೀಟ್ವಂತಿರೆ ಸುಧಾಂಶುಬಿಂಬದ ಕೊರಲಿಂ
--------------
ಜನ್ನ
ಎನೆ ಕೇಳ್ಬು ಮಾರಿದತ್ತಾ ವನಿಪನವಂಗಭಯರುಚಿ ಬಟೆಕ್ಕಿಂತೆಂದಂ ಮನಸಿಜನ ಮಾಯೆ ವಿಧಿವಿಳ ಸನದ ನೆರಂಬಡೆಯೆ ಕೊಂದು ಕೂಗದೆ ನರರಂ
--------------
ಜನ್ನ
ಕರಮೇಜ್ಸ್‌ಯುಳ್ಳ ಪಿಳ್ಳೆಗ- ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ- ದರನಿತ್ತು ಚಂಡಕರ್ಮಂ- ಗರಸನವಂ ನೋಡಿ ಸಲಹು ನೀನೆಂದಿತ್ತಂ
--------------
ಜನ್ನ
ಕಲ್ಲೊಳ್‌ ಪೊನ್‌ ಪಾಲೊಳ್‌ ಘೃತ- ಮಿಲ್ಲೆನವೇಡುಂಟು ದೇಹದೊಣಗಾತ್ಮನದೇ- ಕಿಲ್ಲ ಕುರುಡಂಂಗೆ ತೋಣದೊ- ಡಿಲ್ಲಪ್ಪದೆ ವಸ್ತು ಭೇದಿಪಂಗಾತ್ಮನೊಳಂ
--------------
ಜನ್ನ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ- ಹಿಯುಮಾದರ್‌ ಪಗೆ ಸುತ್ತೆ ಮೀನ್‌ ಮೊಸಳೆಯಾದರ್‌ ಪೋಂತುಮಾಡಾದರ- ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್‌ ತಪ- ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್‌
--------------
ಜನ್ನ
ಗುಣಿಗಳ ಗುಣರತ್ನವಿಭೂ- ಷಣಮೆಸೆವುದೆ ವಿಕಳಹೃದಯರಾದವರ್ಗೆ ನೃಪಾ ಗ್ರಣಿ ಪೇಟ್‌ ತುಪ್ಪೇಣಚೆದ ದ ರ್ಪಣದೊಳ್‌ ಪಜ್ಜಳಿಸಲಾರ್ಪುದೇ ಪ್ರತಿಬಿಂಬಂಂ.
--------------
ಜನ್ನ
ಗೋದಾಮೆಗಂಡ ನವಿಲಂ ತಾದುದು ಕಾರ್ಗಂಡ ಹಂಸನವೊಲಾದುದಲರ್‌ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣ್ಮೆಗೆನ್ನಯ ಚಿತ್ತಂ
--------------
ಜನ್ನ
ಜವಳಿವೇ*ೆ ಮನುಜರೂಪದಿ- ನವನಿಯೊಳೊಗೆದಂತೆ ಕಾಂತಿ ಮೆ೫ೌದಪುದಿಂದಿಂ- ತಿವರ್ಗಳ ಚೆಲ್ಚಿಕೆ ಕಣ್ಗಳ ತವರಾಜಮನಿಂದು ಕಂಡೆನೀ ಬಾಲಕರಂ
--------------
ಜನ್ನ
ಜಿನಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನಮೆಂಬ ತುಂಬಿಯೆಜಕಮ- ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
--------------
ಜನ್ನ
ತವಗಂಂಜುವವರ್ಗೆ ತಾವಂ ಜುವರೆಂಜಲನಾಯ್ಬು ತಿಂಬರೆಂಜಲ ತಾವ್‌ ತಿಂ ಬವನಿಪರಾದಲ್ಲಿಯೆ ನಾಯ್‌ ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ
--------------
ಜನ್ನ
ದೆಸೆದೆಸೆಗೆ ನರಶಿರಂ ತೆ- ತ್ತಿಸಿ ಮೆ೫ೌದುವು ಮದಿಲೊಳಬ್ಬೆ ಪೇರಡಪಿನಪೆ ರ್ಬೆಸನದೆ ಪೊವಗಣ ಜೀವ ಪ್ರಸರಮಂ ಪಲವು ಮುಖದಿನವಳೋಕಿಪವೋಲ್‌
--------------
ಜನ್ನ
-->