ಒಟ್ಟು 11 ಕಡೆಗಳಲ್ಲಿ , 1 ಕವಿಗಳು , 11 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮಳ್ಗಳ್‌ ಬಟೆಕ ಸುದತ್ತರ ಸಮುದಾಯದೊಳಾಗಮೋಕ್ತಿಯಿಂ ನಡೆದು ತವಂ ತಮಗಮರೆ ನೋನ್ಮು ಮುಡಿಪಿದ ಸಮಯದೊಳೀಶಾನಕಲ್ಪದೊಳ್‌ ಜನಿಯಿಸಿದರ್‌
--------------
ಜನ್ನ
ಅಳಿಪುಳ್ಳೊಡೆ ನೊಡಿಜುದೊಡ ನಟೆವುದೆ ಪೆಣ್‌ ತಪ್ಪಿ ನಡೆಯ ಚಿಃ ಕಿಸುಗುಳಮೆಂ ದುಃಖಖವುದೆ ಗೆಲ್ಲಂ ಗೊಂಡಾ ಪುಟು ಪುಟ್ಟುವ ನರಕದೊಳಗೆ ಬೀಟ್ವನೆ ಚದುರಂ
--------------
ಜನ್ನ
ಇವು ಮೊತ್ತಮೊದಲಣುವ್ರತ ಮಿವು ಮಸುಳದೆ ನಡೆದೊಡೈಹಿಕಾಮುತ್ರಿಕಮೆಂ- ಬಿವಸೊಳ್‌ ಸಮಸುಖಿಯಪ್ಪಂ ಭವಭವದೊಳ್‌ ದುಃಖಿಯಪ್ಪನಿವು ಮಸುಳ್ಹಾತಂ
--------------
ಜನ್ನ
ಒರ್ಮೆ ಯಶೋಮತಿ ಮೃಗಯಾ ನರ್ಮಮನಂ ಪರಸಿ ನಡೆದು ಮೃಗಮಂ ಪಡೆದೊಂ- ದೆರ್ಮೆಯ ಪೋರಿಯನಿಕ್ಕಿದ- ನೂರ್ಮಾರಿಗೆ ಮತ್ತಮದನೆ ಮಹಳಕ್ಕಿತ್ತಂ
--------------
ಜನ್ನ
ಕಡಿದು ಕಿಖೆಕಿಚೆದನಲುವಂ ಪುಡಿಗುಟ್ಟಸಿ ತೊವಲನುಗಿದು ಕರುಳ ತೊಡಂಕಂ ಬಿಡಿಸಿ ನಡೆ ನೋಟ್ಟೆನೊಳಗೆ- ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂಂ
--------------
ಜನ್ನ
ತಡವಾದಪ್ಪುದು ಪೌರರ್‌ ಕುಡುವೇಟ್ಟುದು ಹಲವು ಜೀವರಾಶಿಯ ಬಲಿಯಂ ನಡೆಯೆನೆ ಹಸಾದಮಾಗಳೆ ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ
--------------
ಜನ್ನ
ಧರಣೀ ಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ
--------------
ಜನ್ನ
ನಡೆ ಸೋಂಕಿದ ಕಡೆಗಣ್ಗಳ ಕುಡಿವೆಳಗಿಂಂ ಬಿಡುವ ಬೆಮರೊಳಂ ಪದದೊಳಮೇಂ ತಡವಾದರೊ ಕೌಮುದಿ ಕ ಣ್ಚಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್‌
--------------
ಜನ್ನ
ಪರಿವಾರಮಂ ಪ್ರಧಾನರ- ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ- ಧರನಿಂತು ತಪಕೆ ನಡೆಯ- ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್‌
--------------
ಜನ್ನ
ಬೇಂಟೆಗೆ ನಡೆಯೆ ಯಶೋಮತಿ ಗೆಂಟಖೊಳಾರಣ್ಯವಾಸಿಗಳ್‌ ನಿಲೆ ಕಂಡಾ- ಬೇಂಟೆ ಪರಿಯದೊಡೆ ಬಿನದದ ಕಂಟಕನೀ ಸವಣನೆನುತೆ ಬರುತಂಂ ಮುನಿದಂ
--------------
ಜನ್ನ
ರತಿವೆರಸು ಮನಸಿಜಂ ಬನ- ದತಿಶಯಮಂ ನೋಡಲೆಂದು ಬರ್ಪಂತೆ ಯಶೋ- ಮತಿ ಕುಸುಮಾವಳಿವೆರಸು- ನ್ನತಪೀತಚ್ಛತ್ರನಂದನಂ ನಡೆತಂದಂ
--------------
ಜನ್ನ
-->