ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನ ಕೆಲಬಲದವರ್ಗಳ್‌ ಪರಸಿರೆ ಪರಸಿರೆ ನ್ಯಪೇಂದ್ರನಂ ನೀವೆನೆ ಮಂ- ದರಧೀರನಭಯರುಚಿ ನೃಪ ವರ ನಿರ್ಮಲಧರ್ಮದಿಂದೆ ಪಾಲಿಸು ಧರೆಯಂ
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
ಧರ್ಮಪರರ್ಗಲ್ಲದೆಮ್ಮಯ ನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾ ಧರ್ಮದ ಪೋದ ಪೊಲಂಬದು ನರ್ಮದೆಯಿಂ ಗಂಟದೇಕೆ ಕೇಳ್ಬಪೆಯೆಮ್ಮಂ
--------------
ಜನ್ನ
ಪರಿಹರಿಪೆಯೆಮ್ಮ ನುಡಿಯಂ ಗುರುವಚನಮಲಂಘನೀಯಮೆನ್ನದೆ ನೀನಾ ದರದಿಂ ಕೈಕೊಳ್‌ ಧರ್ಮದೊ ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್‌
--------------
ಜನ್ನ
-->