ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನ ಮೂದಲೆ ಮನದೊಳ- ಗಿರೆ ಮೇಳಿಸಿಕೊಂಡು ಬಂದು ಪಾಶಕಿ ಕೊಂದಳ್‌ ಬೆರಗಿಂ ಗಂಡನ ನಾ ಸ್ತೀ- ಚರಿತಮದೇಂ ಕಳೆಯಂರಿದು ಪೆಂಡಿರ ಕೃತಕಂ
--------------
ಜನ್ನ
ಆಳುವ ನಿಜವಿಜಯ ತೇಜೋ ಕಳೆದನೊ ನೃಪತಿ ವಸುಂಧರೆ ಬಳದಿಂ ಪರನ್ಯಪರ ಗಂಡಗಾಳಿಕೆಯ ನದೇಂ ಪೊಳಪಂ ತಳೆದೆಯ್ದೆ ರಾಗಮಂ ಬೀಜುವಿನಂ
--------------
ಜನ್ನ
ಕುದಿರೊಳರ್ದೂಗಿದಿದ ಶಂ ಖದ ದನಿ ನಿಶ್ಚಿದ್ರಮಾದೊಡಂ ಪೊಣ್ಮದೆ ಶಂ ಖದಿನನ್ಯಮಲ್ಲದೇಂ ಪೊ- ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
ತೊನ್ನ ಕೂಟದಿನಾದುದು ತೊನ್ನೀ ರೋಗಕ್ಕೆ ಬಾಡು ಕಳ್‌ ವಿಷಮೆನೆಯುಂ ಮನ್ನಿಸಳೆ ಮಗನ ಮಾತನಿ- ದೇಂ ನಾಯಕನರಕಮೀಕೆಗೊಚ್ಚತಮಾಯ್ತೋ
--------------
ಜನ್ನ
ಮದನನ ಮಾಅಂಕದ ಚೆಂ- ದದ ಗಂಡನಮೃತದನ್ನಳತ್ತೆಯನಿವಳೋ- ವದೆ ಕೊಂದಳ್‌ ಪಾಪಂ ಲೆ- ನದು ಪಾತಕಿ ಪುಟೆತೊಡಲ್ಲದೇಂ ಸತ್ತಪಳೇ
--------------
ಜನ್ನ
-->