ಒಟ್ಟು 6 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಚಂಡಮಾರಿ ಲೋಚನ ಗೋ ಚರತನುವಾಗಿ ಕುವರನಂ ಬಂದಿಸಿ ನೀ ನಾಚಾರ್ಯನೆಯೆಂದಿಂತಿರೆ ಸೂಚಿಸಿದಳ್‌ ನೆರೆದ ಜಾತ್ರೆ ನೆಉ್‌ ಕೇಳ್ವಿನೆಗಂ
--------------
ಜನ್ನ
ಎಂದಾಕೆಗೆ ಲಂಚಮನಿ ತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್‌ ಸಂದಿಸಿದೊಡಮೃತಮತಿ ರಾ ತ್ರಿಂ ದಿವಮಾತನೊಳೆ ಸಲಿಸಿದಳ್‌ ತೆಜಪುಗಳಂ
--------------
ಜನ್ನ
ಎಂದು ಬೆಸಗೊಂಡ ತಾಯ್ಗೆ ಮ ನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್‌ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
--------------
ಜನ್ನ
ಎಂದು ಸುದತ್ತಾಚಾರ್ಯರ ಮುಂದಣಿನರಮನೆಗೆ ಪೋಗದುರ್ವೀಭರಮಂ ನಂದನನೊಳಭಯರುಚಿಯೊಳ್‌ ಸಂದಿಸಿ ತಾನ್‌ ಜೈನದೀಕ್ಷೆಯಂ ಕೈಕೊಂಡಂ
--------------
ಜನ್ನ
ಎಂಬುದುಮರಸಂಂ ಮುನಿವರ- ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ- ಯಾಂಬುಜಪದಮಾ ತನ್ನ ಶಿ- ರೋಂಬುಜದಿಂದರ್ಚಿಸಲ್‌ ಪರಿಚ್ಛೇದಿಸಿದಂ
--------------
ಜನ್ನ
ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ- ರ್ಪೆಸೆದುದು ಚಾಗಿಯಂತೆ ನೆ೫್‌ೌ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ. ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ- ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್
--------------
ಜನ್ನ
-->