ಒಟ್ಟು 4 ಕಡೆಗಳಲ್ಲಿ , 1 ಕವಿಗಳು , 4 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನ್ನರನಾದರದಿಂ ಕುಡೆ ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ ಮನ್ನಿಸಿ ಬಲ್ಲಾಳಂ ಕುಡೆ ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್‌
--------------
ಜನ್ನ
ಧರಣೀ ಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ
--------------
ಜನ್ನ
ಪರಿಮಳದ ತೂಬನೆತ್ತಿದ ನರಲಂಬಂ ಜನಮನೋವನಕ್ಕೆನೆ ಕಾಳಾ ಗರುಧೂಮಲತಿಕೆ ಜಾಲಾಂ ದರದಿಂದೊಗೆದುದು ಕಪೋತ ಪಕ್ಷಚ್ಛುರಿತಂ
--------------
ಜನ್ನ
ಪರಿಹರಿಪೆಯೆಮ್ಮ ನುಡಿಯಂ ಗುರುವಚನಮಲಂಘನೀಯಮೆನ್ನದೆ ನೀನಾ ದರದಿಂ ಕೈಕೊಳ್‌ ಧರ್ಮದೊ ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್‌
--------------
ಜನ್ನ
-->