ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇತ್ತಲ್‌ ಬಟುಕ್ಕ ಪಂಚಶ- ತೋತ್ತಮ ಯತಿಸಮಿತಿವೆರಸು ಗಮನಪ್ರಾಯ ಶ್ಚಿತ್ರನಿಮಿತ್ತಂ ಬಂದ ಸು ದತ್ತಾಚಾರ್ಯರ್‌ ಪುರೋಪವನಮಂ ಸಾರ್ದರ್‌
--------------
ಜನ್ನ
ಎಂದು ಸುದತ್ತಾಚಾರ್ಯರ ಮುಂದಣಿನರಮನೆಗೆ ಪೋಗದುರ್ವೀಭರಮಂ ನಂದನನೊಳಭಯರುಚಿಯೊಳ್‌ ಸಂದಿಸಿ ತಾನ್‌ ಜೈನದೀಕ್ಷೆಯಂ ಕೈಕೊಂಡಂ
--------------
ಜನ್ನ
ಗಂಗಕುಲಚಕ್ರವರ್ತಿ ಕ- ಳಿಂಂಗಧರಾಧೀಶರಿವರಸಾರಂ ಸಂಸಾ- ರಂ ಗಡಮೆಂದರಣಿದಜೆದು ತ- ಪಂಗೆಯ್ದರ್‌ ನಾಮದಿಂ ಸುದತ್ತಾಚಾರ್ಯರ್‌
--------------
ಜನ್ನ
ತಮದಿಂದಂ ಪೊಅಮಟ್ಟು- ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ- ಯಮದೆ ಸುದತ್ತಾಚಾರ್ಯರ ಸಮುದಾಯದೊಳಿರ್ದು ತತ್ವಪರಿಣತನಾದಂ
--------------
ಜನ್ನ
ಮತ್ತಂ ಧರ್ಮವಿಹಾರ ನಿ- ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳ್ಬು ಸು- ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
--------------
ಜನ್ನ
-->