ಒಟ್ಟು 21 ಕಡೆಗಳಲ್ಲಿ , 1 ಕವಿಗಳು , 20 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡಸಿದ ನಲ್ಲಳ ತಪ್ಪಂ ತಡವಿಕ್ಕಿದೊಡೇಟು ಭವದ ಕೇಡಡಸುವ ಕಿಟ್‌ ನುಡಿಯಂ ನುಡಿದಳ್‌ ತಾಯೊಂ ದಡಸಿದೊಡೇಅಡಸಿತೆಂಬ ನುಡಿ ತಪ್ಪುಗುಮೇ
--------------
ಜನ್ನ
ಅಭಯರುಚಿಯಭಯಮತಿಯೆಂ- ಬುಭಯಮನಾ ಪಾಪಕರ್ಮನುಯ್ವೆಡೆಯೊಳ್‌ ಮ ತ್ತಭಯರುಚಿ ತಂಗೆಗೆಂದಪ ನಭೀತೆಯಾಗೆಲಗೆ ತಾಯೆ ಮರಣದ ದೆಸೆಯೊಳ್‌
--------------
ಜನ್ನ
ಅವರ ಗುಣಮವರ ಸಂಯಮ- ಮವರ ತಪಶ್ಚರಣಮೆಂಬುದವರಿವರಳವ ಲ್ಲವರ ಪೆಸರ್ಗೊಂಡ ನಾಲಗೆ ಸವಿದಅಿಯದು ಬಟಿಕ ತಾಯ ಮೊಲೆವಾಲ್ಪನಿಯಂ
--------------
ಜನ್ನ
ಆ ನೃಪತಿ ಬಳಿಕ ತಾಯುಂ ತಾನುಂ ಚಂಡಿಕೆಯ ಪೂಜೆಗೆಂದೆಟ್ಟಂದಂ ನಾನಾ ವಿಧದರ್ಚನೆಯಿಂ ಮಾನೋಮಿಯ ಮುಂದೆ ಬಂದ ಭೌಮಾಷ್ನಮಿಯೊಳ್‌
--------------
ಜನ್ನ
ಇಸೆ ಪಸುಮಜೆ ಯೋನಿಮುಖ ಪ್ರಸವಕ್ಕಲಸಿದವೊಲೇಖ ಬಾಯಿಂ ತಾಯೊಂ- ದಸುವೆರಸು ಬಿರ್ದುದಂ ರ ಕ್ಷಿಸಲಿತ್ತಂ ಮಾದರಂಗೆ ಕರುಣದಿನರಸಂ
--------------
ಜನ್ನ
ಎಂದು ಬೆಸಗೊಂಡ ತಾಯ್ಗೆ ಮ ನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್‌ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
--------------
ಜನ್ನ
ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ- ಜಿನ ಲಡ್ಡುಗೆಯಂ ಮಾಡಿದು- ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ
--------------
ಜನ್ನ
ಎನೆ ತಾಯ ಮೋಹದಿಂದಂ ಜನಪನೊಂಂಡಂಬಟ್ಟು ಮನದೊಳಿಂತೆಂದಂ ಭಾ ವನೆಯಿಂದಮಪ್ಪು ದಾಸ್ರವ ಮೆನಗಿನ್ನೆಂತಪ್ಪ ಪಾಪಮಿದಿರ್ವಂದಪುದೋ
--------------
ಜನ್ನ
ಎನೆ ಮುನಿವಚನದೊಳಂ ನಂ- ದನರೂಳಮಾಗಳೆ ಯಶೋವುತ್ತಿಕಿತಿಪಂ ತೆ- ಳ್ಮನೆ ತಿಳಿದು ಭಾಷು ಸಂಕ- ಲನ ವಧೆಗಿನಿತಾಯ್ತು ದಿಟದಿನೇನೇನಾಗರ್‌
--------------
ಜನ್ನ
ಕಂತುವಿನ ಕಯ್ಯ ಕೂರಸಿ ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀ ನಿಂತಪ್ಪ ಕಾಮದೇವಂ ಗಂತೆಂತಾಯ್ದಅಸಿ ಕೂರ್ತೆಯೆಂದಾನಣುಯೆಂ
--------------
ಜನ್ನ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ- ಹಿಯುಮಾದರ್‌ ಪಗೆ ಸುತ್ತೆ ಮೀನ್‌ ಮೊಸಳೆಯಾದರ್‌ ಪೋಂತುಮಾಡಾದರ- ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್‌ ತಪ- ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್‌
--------------
ಜನ್ನ
ತವಗಂಂಜುವವರ್ಗೆ ತಾವಂ ಜುವರೆಂಜಲನಾಯ್ಬು ತಿಂಬರೆಂಜಲ ತಾವ್‌ ತಿಂ ಬವನಿಪರಾದಲ್ಲಿಯೆ ನಾಯ್‌ ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ
--------------
ಜನ್ನ
ಪೋದಿರುಳಿನ ಕಿತ್ತಡಮಾ ಮೂದಲೆಯಾಗಿಂತು ನುಡಿದೊಉುಟೆದುದನಉಣುದಾ ಪಾದರಿ ಬೇಸತ್ತವೊಲಿರೆ ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ
--------------
ಜನ್ನ
ಬೆದೆಯಾದ ತಾಯನೇಣಜೆ- ತ್ತದು ಸೊರ್ಕಿದ ಗೂಳಿ ತಾಯನೇಚೆತ್ತೆಂಬಂ- ದದೆ ಮತ್ತದೊಮದು ಬಸ್ತಕ- ಮದನಿಜೆಯಲ್ಲ ಸತ್ತು ಪೊಕ್ಕುದಜೆಯೊಳ್‌ ಜೀವಂ
--------------
ಜನ್ನ
ಬೇಡಂ ಪಿಳುಕೊತ್ತಿನ ತಾಯ್‌ ಓಡಲ್‌ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂ ಬೇಡಿತಿಗೆ ಸಲಹಲಿತ್ತೊಡೆ ಗೊಡೊಳದು ಬಳೆದು ತಳೆದುದಂಗಚ್ಛವಿಯಂ
--------------
ಜನ್ನ
-->