ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಪರಮ ಜಿನಸಮಯ ಕುಮುದಿನೀ ಶರಚ್ಚಂದ್ರ ಸದಮಲ ರಾಮಚಂದ್ರ ಮುನೀಂದ್ರಪದ ಭಕ್ತಂ ಜನ್ನಕವಿ ಜನಕ್ಕೆ ಮಾಡಿದ ಯಶೋಧರ ಚರಿತಾವತಾರಂ ಸಂಪೂರ್ಣಂ
--------------
ಜನ್ನ
ಎಂದು ಮನಸಂದು ಜಿನಮತ ನಂದನದೊಳ್‌ ದಾನಲತೆ ದಯಾರಸದೆ ಜಗಂ ಪಂದರೆನೆ ಪರ್ವಿ ಪೊಸಜಸ- ದಿಂಂದಂ ಮರಲ್ಪಿರೆ ಯಶೋಧರಂ ಬೆಳೆಯಸಿದಂ
--------------
ಜನ್ನ
ಎನಗೆ ನಿಜಮಹಿಮೆಯಂ ನೆ- ಟ್ಪನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್‌ ಜಿನಸೇನಾಚಾರ್ಯರ್‌ ಸಿಂ- ಹಣಂದಿಗಳ್‌ ಸಂದ ಕೊಂಡ ಕುಂದಾಚಾರ್ಯರ್‌
--------------
ಜನ್ನ
ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ- ಜಿನ ಲಡ್ಡುಗೆಯಂ ಮಾಡಿದು- ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ
--------------
ಜನ್ನ
ಜಿನಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನಮೆಂಬ ತುಂಬಿಯೆಜಕಮ- ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
--------------
ಜನ್ನ
ಪಗಲನಿರುಳ್‌ ನಿಜರುಚಿಯಿಂ ಮಿಗಿಸುವ ಜಿನಭವನದರುಣಮಣಿ ಕಲಶಂಗಳ್‌ ನಗುವುವು ಕೇತುಗಳಿಂ ಕೇ ತುಗಳೊಳ್‌ ಕೆಳೆಗೊಂಡು ನಿಂದು ರವಿಮಂಡಲಮಂ
--------------
ಜನ್ನ
ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವ್ಟನಂ ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂ ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್‌ ಸಿರಿ ನೆರೆದಿರ್ಕೆ ನಾಟ್ವಭು ಜನಾರ್ಧನದೇವನ ವಕ್ವಪದ್ಮದೊಳ್‌
--------------
ಜನ್ನ
ಶ್ರೀಜಿನದೀಕ್ಷೆಗೆ ತನುವಂ ಯೋಜಿಸೆ ಕಲ್ಯಾಣಮಿತ್ರನೆಂಬರಸು ಯಥಾ ರಾಜಾ ತಥಾ ಪ್ರಜಾ ಎಂ ಬೋಜೆಯಿನಂದರಸುಗಳ್‌ ಪಲರ್‌ ತಜೆಸಂದರ್‌
--------------
ಜನ್ನ
-->