ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಿನಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನಮೆಂಬ ತುಂಬಿಯೆಜಕಮ- ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
--------------
ಜನ್ನ
ಬಸಿದಪುದು ಮೆಯ್ಯ ರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್‌ ಬಸನಿಗತನಮಂ ಮಾಣ್ಬೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
--------------
ಜನ್ನ
ಭೈರವನ ಜವನ ಮಾರಿಯ ಮೂರಿಯವೋಲ್‌ ನಿಂದ ಮಾರಿದತ್ತಂ ಲಲಿತಾ- ಕಾರರ ಧೀರರ ಬಂದ ಕು ಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
--------------
ಜನ್ನ
ಮಾರಿ ಮಾಲಯಾನಿಳಂ ನವ ನೀರಜವನಮೆಂಬ ಕೆಂಡದೊಳ್‌ ದಂಡನಮ- ಸ್ಕಾರದೆ ಬಂಂದಪನಿತ್ತವ- ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್‌..
--------------
ಜನ್ನ
ಮುನಿಸಮುದಾಯಸಮೇತಶಂ ವಿನೇಯಜನ ವನಜವನದಿವಾಕರನಂತಾ ಮುನಿಪನುಪವಾಸಮಂ ಪ- ರ್ವ ನಿಮಿತ್ತಂ ಕಳೆದು ಬಲುಕ ಬಾಲಕಯುಗಮಂ
--------------
ಜನ್ನ
-->