ಒಟ್ಟು 25 ಕಡೆಗಳಲ್ಲಿ , 1 ಕವಿಗಳು , 22 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದು ಪಿರಿಯ ಸಿರಿಯ ಬಾಟ್ಕೊದ- ಲದು ಚಾಗದ ಭೋಗದಾಗರಂ ಸಕಲಸುಖ- ಕ್ಯದು ಜನ್ಮಭೂಮಿಯೆನಿಸದು- ದದನಾಳ್ವಂ ಮಾರಿದತ್ತನೆಂಬ ನೃಪಾಲಂ
--------------
ಜನ್ನ
ಆ ಚಂಡಮಾರಿ ಲೋಚನ ಗೋ ಚರತನುವಾಗಿ ಕುವರನಂ ಬಂದಿಸಿ ನೀ ನಾಚಾರ್ಯನೆಯೆಂದಿಂತಿರೆ ಸೂಚಿಸಿದಳ್‌ ನೆರೆದ ಜಾತ್ರೆ ನೆಉ್‌ ಕೇಳ್ವಿನೆಗಂ
--------------
ಜನ್ನ
ಇತ್ತಲ್‌ ಬಟುಕ್ಕ ಪಂಚಶ- ತೋತ್ತಮ ಯತಿಸಮಿತಿವೆರಸು ಗಮನಪ್ರಾಯ ಶ್ಚಿತ್ರನಿಮಿತ್ತಂ ಬಂದ ಸು ದತ್ತಾಚಾರ್ಯರ್‌ ಪುರೋಪವನಮಂ ಸಾರ್ದರ್‌
--------------
ಜನ್ನ
ಎಂದು ಸುದತ್ತಾಚಾರ್ಯರ ಮುಂದಣಿನರಮನೆಗೆ ಪೋಗದುರ್ವೀಭರಮಂ ನಂದನನೊಳಭಯರುಚಿಯೊಳ್‌ ಸಂದಿಸಿ ತಾನ್‌ ಜೈನದೀಕ್ಷೆಯಂ ಕೈಕೊಂಡಂ
--------------
ಜನ್ನ
ಎಂದೊಡೆ ತಳಾಅನಾಯಕ- ನೆಂದಂ ನೀಮೆಂದ ಮಾತು ಪೊಲ್ಲದು ನೋಡ ಲೈಂದು ಪಲರಂ ವಿಚಾರಿಸಿ ಕೊಂದೆಂ ತನುವಲ್ಲದಾತ್ಮನಂ ಕಂಡಜೆಯೆಂ
--------------
ಜನ್ನ
ಎನಗೆ ನಿಜಮಹಿಮೆಯಂ ನೆ- ಟ್ಪನೆ ಮಾಡುಗೆ ಕೂರ್ತು ವೀರಸೇನಾಚಾರ್ಯರ್‌ ಜಿನಸೇನಾಚಾರ್ಯರ್‌ ಸಿಂ- ಹಣಂದಿಗಳ್‌ ಸಂದ ಕೊಂಡ ಕುಂದಾಚಾರ್ಯರ್‌
--------------
ಜನ್ನ
ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಂಗಳಂ ಕೊಂಕಿದೊಡೇಂ ಸ್ಮರಚಾಪಮನಿಳಿಕಯ್ದೆರೆ ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್‌
--------------
ಜನ್ನ
ಗಂಗಕುಲಚಕ್ರವರ್ತಿ ಕ- ಳಿಂಂಗಧರಾಧೀಶರಿವರಸಾರಂ ಸಂಸಾ- ರಂ ಗಡಮೆಂದರಣಿದಜೆದು ತ- ಪಂಗೆಯ್ದರ್‌ ನಾಮದಿಂ ಸುದತ್ತಾಚಾರ್ಯರ್‌
--------------
ಜನ್ನ
ಗಹಗಹಿಕೆವಡೆದ ವಹಿಣಿಯ ಸುಹಾಹೆ ರುಂಪೆಯದೊಳಮರೆ ಠಾಯದೊಳಂಂ ನಿ ರ್ವಹಿಸಿ ನೆಲೆಗೊಳಿಸಿ ಬಯ್ಲಿಕೆ ಮಹಚಾಳೆಯದಲ್ಲಿ ಮೂರ್ತಿವಡೆದುದು ರಾಗಂ
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ತಮದಿಂದಂ ಪೊಅಮಟ್ಟು- ತ್ತಮಚಾರಿತ್ರದೊಳೆ ನೆರೆದು ಮೆಯ್ಯಿಕ್ಕಿದ ಸಂ- ಯಮದೆ ಸುದತ್ತಾಚಾರ್ಯರ ಸಮುದಾಯದೊಳಿರ್ದು ತತ್ವಪರಿಣತನಾದಂ
--------------
ಜನ್ನ
ತಳಿರ್ಗಳ ಚಾಳೆಯಮೆಳಲತೆ- ಗಳ ಲುಳಿ ಶಿಳಿಗೊಲದ ತೆರೆಯ ತಾಳಂ ಪೊಸವೂ- ಗಳ ನೋಟಮಾಗೆ ನೃಪನಂ ಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ
--------------
ಜನ್ನ
ಧರ್ಮಪರರ್ಗಲ್ಲದೆಮ್ಮಯ ನಿರ್ಮಲ ಚಾರಿತ್ರಮಿಂಬುಕಯ್ಯದು ನಿನಗಾ ಧರ್ಮದ ಪೋದ ಪೊಲಂಬದು ನರ್ಮದೆಯಿಂ ಗಂಟದೇಕೆ ಕೇಳ್ಬಪೆಯೆಮ್ಮಂ
--------------
ಜನ್ನ
ನೆಲೆಮಾಡದೊಳೆಡೆಯಾಡುವ ಕಲಹಂಸಾಲಸವಿಳಾಸವತಿಯರ ಮುಖಮಂಂ- ಡಲಕೆ ಸರಿಯಾಗಲಾಣದೆ ಸಲೆ ಮಾಟ್ಟಂ ಚಂದ್ರನಿಂತು ಚಾಂದ್ರಾಯಣಮಂ
--------------
ಜನ್ನ
ಪೊಂಬಾಟ್‌ ಚಾಮರಂ ಚಂ ದ್ರಂ ಬೆಳ್ಗೊಡೆ ಕೇಳಿಶಿಖರಿ ಸಿಂಹಾಸನಮಾ- ಯ್ನೆಂಬಿನೆಗಮಂಗಜಂ ಮಾ- ಕುಮಾರಂಗೆ ಪಟ್ಟಮಂ ಕಟ್ಟಿಸಿದಂ
--------------
ಜನ್ನ
-->