ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 8 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಿತೆಸೆವ ಚಂದ್ರಮತಿಗಂ ಜನಪತಿಗಂ ಪುಟ್ಟಿದಂ ಯಶೋಧರನೆಂಬಂ ಜನಮೋಹನಬಾಣಂ ಕ ರ್ಬಿನ ಬಿಲ್ಲಂ ನನೆಯ ನಾರಿಗಂ ಪುಟ್ಟಿದವೊಲ್‌
--------------
ಜನ್ನ
ಅಭಯರಚಿಯಭಯಮತಿಯಿೆಂ ಬಭಿಧಾನದೆ ಚಂದ್ರಮತಿ ಯಶೋಧರರಮಳ್ಳಳ್‌ ಶುಭಲಕ್ಷಣಮಷ್ಪತ್ತಿರೆ ಸ್ವಭಾವಸಿದ್ಧಂಗಳಾಗಿ ಬಳೆಯುತ್ತಿರ್ಕುಂ
--------------
ಜನ್ನ
ಅಮೃತಮತಿಯೆಂಬ ಪಾತಕಿ ಯ ಮಾಯೆ ಬನಮಾಯ್ತು ಚಂದ್ರಮತಿಮಾತೆಯ ಮಾ- ತೆಮಗೆ ಬಲೆಯಾಯ್ತು ಹಿಂಸನ ಮಮೋಘಶರಮಾಯ್ತು ಕಡೆದುದಾತ್ಮಕುರಂಗಂ
--------------
ಜನ್ನ
ಕರಹಟದೊಳ್‌ ಬೇಂಟೆಯ ಕು- ಕ್ಯುರಿಯಾದಳ್‌ ಸತ್ತು ಚಂದ್ರಮತಿಯುಂ ಬಟೆಕಾ- ಯೆರಡುಮುಪಾಯನ ಘಟನೆಯಿ- ನರಮನೆಯಂ ಸಾರ್ದುವಾ ಯಶೋಧರಸುತನಾ
--------------
ಜನ್ನ
ತರಿಸಿ ಪರಿಶುದ್ದಿ ಗೆಯ್ದದ- ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ- ಧರ ಚಂದ್ರಮತಿಗಳೊಸೆದು- ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್‌
--------------
ಜನ್ನ
ದೊರೆವಡೆದ ಯಶೌಘನ ಭೂ ವರತಿಳಕನ ಕಣ್ಗಳಂಗರಕ್ಕರ್‌ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯನೆ ಸಂದತ್ತು ಚಂದ್ರಮತಿಗರಸಿತನಂ
--------------
ಜನ್ನ
ನಿರವಿಸಿದ ಚಂದ್ರಮತಿಯೆಂ- ಬರಸಿಯೆ ನಾಯುರಗಿ ಮೊಸಳೆ ಆಡು ಉಲಾಯಂ ಚರಣಾಯುಧವಧುವಾದಳ್ ಗುರುವಚನದಿನೀಗಳಭಯಮತಿಯಾಗಿರ್ದಳ್‌
--------------
ಜನ್ನ
ಮಾಡಿದ ಕೋಚೆಯನಜೆದ- ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್‌ ಗೂಡಿನ ಕೋಣಚೆಗಳಾದರ್‌ ನೋಡಯ್‌ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್‌
--------------
ಜನ್ನ
-->