ಒಟ್ಟು 7 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನ ಮೂದಲೆ ಮನದೊಳ- ಗಿರೆ ಮೇಳಿಸಿಕೊಂಡು ಬಂದು ಪಾಶಕಿ ಕೊಂದಳ್‌ ಬೆರಗಿಂ ಗಂಡನ ನಾ ಸ್ತೀ- ಚರಿತಮದೇಂ ಕಳೆಯಂರಿದು ಪೆಂಡಿರ ಕೃತಕಂ
--------------
ಜನ್ನ
ಆಗಳ್‌ ತಂದೆಯ ತಪದು- ದ್ಯೋಗಂ ತಡವಾಗದಂತೊಡಂಬಟ್ಟು ಮಹೀ ಭೋಗಕ್ಕನುಜ ಯಶೋಧರ ನಾಗಿರೆ ಬಟೆಕಭಯರುಚಿಯುಮನುಜೆಯ ಸಹಿತಂ
--------------
ಜನ್ನ
ಇತಿಹಾಸಮೆಂಬ ವಿಮಳಾ- ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ- ನ್ವಿತಮಾಗಿರೆ ಕಥೇ ಬುಧಸಂ- ತತಿಗಕ್ಷಯ ಸುಖಮನೀವುದೊಂಂದಚ್ಚರಿಯೇ
--------------
ಜನ್ನ
ಪೊಡೆಯೆ ಕೃಕವಾಕು ನಿನದಂ ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಟೆರೆ ಪೊಯ್‌ ವಡೆದಂತೆ ಪಂದೆಯಂ ಪಾ- ವಡರ್ದಂತಾಗಿರೆ ಯಶೋಧರಂ ಬೆರಗಾದಂ
--------------
ಜನ್ನ
ಮನಮಿರೆ ಪುರ್ವಿನ ಮೊದಲೊಳ್‌ ಮನದೊಳಗಿರೆ ವಾಯು ಕರಣತತಿ ವಾಯುವಿನೊಳ್‌ ಕುನಿದಿರೆ ಪದ್ಮಾಸನದೊಳ್‌ ತನುವಿರೆ ಯೋಗೀಂದ್ರ ನಾತ್ಮ ಚಿಂತೆಯೊಳಿರ್ದಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ- ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ- ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂ ಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
--------------
ಜನ್ನ
-->