ಒಟ್ಟು 8 ಕಡೆಗಳಲ್ಲಿ , 1 ಕವಿಗಳು , 6 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಣ್ಣನ ಮಾತಂ ಮನದೊಳ್‌ ತಿಣ್ಣಂ ತಳೆದೆಂದಳನುಜೆ ಮಾಡಿದುದಂ ನಾ ವುಣ್ಣದೆ ಪೋಕುಮೆ ಭಯಮೇ ಕಣ್ಣ ಭವಪ್ರಕೃತಿ ವಿಕೃತಿ ನಾವಣದುದೇ
--------------
ಜನ್ನ
ಕೇಳಲೊಡಂ ಶಬ್ದಾರ್ಥಗು- ಣಾಳಂಕೃತಿ ರೀತಿಭಾವರಸವೃತ್ತಿಗಳಂ ಮೇಳವಿಸ [ಲ್‌] ಬಲ್ಲಂ ಬ- ಲ್ಹಾಳಂ ಸಾಹಿತ್ಯಕಮಳಮತ್ತಮರಾಳಂ
--------------
ಜನ್ನ
ಕ್ಷಿತಿಯೋಳ್‌ ಸಂಸ್ಕೃತದಿಂ ಪ್ರಾ- ಕೃತದಿಂ ಕನ್ನಡದಿನಾದ್ಯರಾರ್‌ ಈ ಕೃತಿಯಂ ಕೃತಿಮಾಡಿದರವರ್ಗಳ ಸನ್‌ ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್‌
--------------
ಜನ್ನ
ಪದವಿಯ ರೂಪಿನ ಸೊಬಗಿನ ಮದಮಂ ಮಾಡುವರ ಮೂಗಿನೊಳ್‌ ಪಾತ್ರಮನಾ ಡದೆ ಮಾಣದನಂಗನ ಕೃತಿ ಸುದತಿಯರ ವಿಕಾರಮೆಂಬ ವಿದ್ಯಾಬಲದಿಂ
--------------
ಜನ್ನ
ಪರಮಜಿನೇಂದ್ರ ಶಾಸನವಸಂತದೊಳೀ ಕೃತಿ ಕೋಕಿಲಸ್ವ್ಟನಂ ಪರೆಗಸಹಾಯಶೂರನ ಭುಜಕ್ಕೆ ಜಯಂ ಸಮಸಲ್ಲೆ ಸಂತತಂ ಪರಿಮಳದಂತೆ ವಾಣಿ ನೆಲಸಿರ್ಕೆ ವಿಕಾಸವಿಲಾಸದಂತೆವೊಲ್‌ ಸಿರಿ ನೆರೆದಿರ್ಕೆ ನಾಟ್ವಭು ಜನಾರ್ಧನದೇವನ ವಕ್ವಪದ್ಮದೊಳ್‌
--------------
ಜನ್ನ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ- ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ- ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂ ಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
--------------
ಜನ್ನ
-->