ಒಟ್ಟು 9 ಕಡೆಗಳಲ್ಲಿ , 1 ಕವಿಗಳು , 7 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನುಮಾಗಳೆ ನೆತ್ತದ ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ- ದರೆ ಗೆತ್ತು ಪಿಡಿದುದೆಂಬಾ- ಚರಿ ಕುಕ್ಕರಿ ನೊಂದು ಬೀಟ್ವ ನಂದನಚರನಂ
--------------
ಜನ್ನ
ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಂಗಳಂ ಕೊಂಕಿದೊಡೇಂ ಸ್ಮರಚಾಪಮನಿಳಿಕಯ್ದೆರೆ ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್‌
--------------
ಜನ್ನ
ಜಿನಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನಮೆಂಬ ತುಂಬಿಯೆಜಕಮ- ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
--------------
ಜನ್ನ
ಧರಣೀ ಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ
--------------
ಜನ್ನ
ಪರನೃಪರ ರಾಜ್ಯಲಕ್ಷ್ಮಿಯ ಕುರುಳಾಕರ್ಷಣದೆ ನೀಳ್ಬ ತೋಳ್‌ ಮೆಉೌವುದು ಪೇ ರುರದೊಳ್‌ ನೆಲಸಿದ ಲಕ್ಷ್ಮಿ ಕರಿಣಿಗೆ ಬಾಳಿಸಿದ ರನ್ನದಮಳ್ಗಂಬದವೊಲ್‌
--------------
ಜನ್ನ
ಪರನೃಪರನಲ್ಲದೀ ಪುಮಿ ಕರನಅಂವುದೆ ಮದ್ಭುಜಾಸಿಯಿದು ಕೈಯಿಕ್ಕಲ್‌ ಕರಿ ಕರಿಗಲ್ಲದಿಉಂಪೆಗೆ ಪರಿವುದೆ ಹರಿ ಕರಿಯನಲ್ಲದಿಅಿವುದೆ ನರಿಯಂ
--------------
ಜನ್ನ
ಮುದುಗರಡಿಯ ಮದುದೊವಲಂ ದದ ಕರಿಯಂ ತಾಳಕಾಯ ಮೋಳಿಗೆಯೊಂದಂಂ ದದ ಮರುಡನಷ್ಟವಂಕಂ ಮೊದಲೊಣಗಿದ ಕೂನಗೊರಡಿನಂದದ ಕೊಂಕಂ.
--------------
ಜನ್ನ
-->