ಒಟ್ಟು 5 ಕಡೆಗಳಲ್ಲಿ , 1 ಕವಿಗಳು , 5 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಮೃತಮತಿಯೆತ್ತ ರೂಪಾ ಧಮನಷ್ಟಾವಂಕನೆತ್ತ ಚಿತ್ರಮಪಾತ್ರೇ ರಮತೇ ನಾರೀ ಎಂಬುದು ಸಮನಿಸಿದುದು ಬೆಂದ ಬಿದಿಗೆ ಕಣ್ಣಿಲ್ಲಕ್ಕುಂ
--------------
ಜನ್ನ
ಎಂಬ ನುಡಿಗೇಳ್ಬು ಮೋಪಳ್‌ VEDA ಕೂಡಿರ್ದ ನಣ್ಣುಗಂಡುಂ ತಮದಿಂ ದಂ ಬೆಂದು ಸತ್ತುದರೆಗೊ- ಯ್ದುಣ್ಣುದಜೆಂ ನೊಂದು ಸತ್ತುದಿಲ್ಲಜಪೋತಂ
--------------
ಜನ್ನ
ಎಂಬುದುಮರಸಂಂ ಮುನಿವರ- ರಂ ಬಲಗೊಂಡೆಣಗಿ ನೆಗಲ್ಬ ಪೊಲ್ಲಮೆಗೆ ತದೀ- ಯಾಂಬುಜಪದಮಾ ತನ್ನ ಶಿ- ರೋಂಬುಜದಿಂದರ್ಚಿಸಲ್‌ ಪರಿಚ್ಛೇದಿಸಿದಂ
--------------
ಜನ್ನ
ಎನೆ ಜನಪತಿ ಮನಮಲ್ಲದ ಮನದೊಳೊಡಂಬಟ್ಟು ಬಂದು ತಾಯೊಡನುಣಿ ನಂ- ಜಿನ ಲಡ್ಡುಗೆಯಂ ಮಾಡಿದು- ದನುಣ್‌ ಮಹಾರಾಜ ಎಂಬಿನಂ ಸವಿದುಂಡಂ
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
-->