ಒಟ್ಟು 3 ಕಡೆಗಳಲ್ಲಿ , 1 ಕವಿಗಳು , 3 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಸನ ಕೆಲಬಲದವರ್ಗಳ್‌ ಪರಸಿರೆ ಪರಸಿರೆ ನ್ಯಪೇಂದ್ರನಂ ನೀವೆನೆ ಮಂ- ದರಧೀರನಭಯರುಚಿ ನೃಪ ವರ ನಿರ್ಮಲಧರ್ಮದಿಂದೆ ಪಾಲಿಸು ಧರೆಯಂ
--------------
ಜನ್ನ
ಅರಸನ ಮೂದಲೆ ಮನದೊಳ- ಗಿರೆ ಮೇಳಿಸಿಕೊಂಡು ಬಂದು ಪಾಶಕಿ ಕೊಂದಳ್‌ ಬೆರಗಿಂ ಗಂಡನ ನಾ ಸ್ತೀ- ಚರಿತಮದೇಂ ಕಳೆಯಂರಿದು ಪೆಂಡಿರ ಕೃತಕಂ
--------------
ಜನ್ನ
ಅರಸನುಮಾಗಳೆ ನೆತ್ತದ ಭರದಿಂ ಕೊಳ್ಳೆನುತುಮಿಕ್ಕೆ ನವಿಲಂ ಕೊಳ್ಳೆಂ- ದರೆ ಗೆತ್ತು ಪಿಡಿದುದೆಂಬಾ- ಚರಿ ಕುಕ್ಕರಿ ನೊಂದು ಬೀಟ್ವ ನಂದನಚರನಂ
--------------
ಜನ್ನ
-->