ಒಟ್ಟು 200 ಕಡೆಗಳಲ್ಲಿ , 1 ಕವಿಗಳು , 146 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲೆಮಾಡದೊಳೆಡೆಯಾಡುವ ಕಲಹಂಸಾಲಸವಿಳಾಸವತಿಯರ ಮುಖಮಂಂ- ಡಲಕೆ ಸರಿಯಾಗಲಾಣದೆ ಸಲೆ ಮಾಟ್ಟಂ ಚಂದ್ರನಿಂತು ಚಾಂದ್ರಾಯಣಮಂ
--------------
ಜನ್ನ
ಪಗಲನಿರುಳ್‌ ನಿಜರುಚಿಯಿಂ ಮಿಗಿಸುವ ಜಿನಭವನದರುಣಮಣಿ ಕಲಶಂಗಳ್‌ ನಗುವುವು ಕೇತುಗಳಿಂ ಕೇ ತುಗಳೊಳ್‌ ಕೆಳೆಗೊಂಡು ನಿಂದು ರವಿಮಂಡಲಮಂ
--------------
ಜನ್ನ
ಪರಮಾತ್ಮ ನೆನ್ನನೆಂದೊಡೆ ಚರಮಾಂಗಪ್ರಮಿತನಖಿಲಲೋಕ ಸಮಾನಂ ನಿರವಯವಂ ನಿತ್ಯಂ ನಿ- ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ
--------------
ಜನ್ನ
ಪರಿವಾರಮಂ ಪ್ರಧಾನರ- ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ- ಧರನಿಂತು ತಪಕೆ ನಡೆಯ- ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್‌
--------------
ಜನ್ನ
ಪರೆವುದು ದುರಿತತಮಿಸ್ರಂ ಪೊರೆಯೇಜುದಮಳದೃಷ್ಟಿಕುವಳಯ ವನಮಾ- ಚರಿಪ ಜನಿಕ್ಕೆ ಯಶೋಧರ ಚರಿತ ಕಥಾಶ್ರವಣಮೆಂಂಬ ಚಂದ್ರೋದಯದೊಳ್‌
--------------
ಜನ್ನ
ಪಲವಂಂದದ ನಿಗ್ರಹದಿಂ ಕೊಲಿಸಿದೊಡಾ ಮೊಸಳೆ ಸತ್ತುಮದುವೆ ಬಟೆಕ್ಕಾ ಪೊಲಗೇರಿಯಾಡಿನೊಡಲೊಳ್‌ ನೆಲಸಿ ಬಟೆಕ್ಕೊಯ್ಯನೊಗೆದುದಾಡಿನ ರೂಪಿಂ
--------------
ಜನ್ನ
ಪೊಡೆಯೆ ಕೃಕವಾಕು ನಿನದಂ ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಟೆರೆ ಪೊಯ್‌ ವಡೆದಂತೆ ಪಂದೆಯಂ ಪಾ- ವಡರ್ದಂತಾಗಿರೆ ಯಶೋಧರಂ ಬೆರಗಾದಂ
--------------
ಜನ್ನ
ಪೋಂತಾದೆನಿಲ್ಲಿ ಸಗ್ಗದೊ- ಳೆಂತುಂಡಪೆನುಂಡ ಪಾರ್ವರೊಲಿದುದು ಗೆಡೆವರ್‌ ಪೋಂತಂ ಕೊಂದು ದಿವಕ್ಕದು- ಮುಂತಾಗಿಯೆ ಸಲ್ವುದೆಂಬರಿದನ್ನೇನೆನ್ನರ್‌
--------------
ಜನ್ನ
ಪ್ರಜೆಯೆಲ್ಲಂ ಜಲಗಂಧ ವ ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ ವ್ರಜದಿಂ ಪೂಜಿಸುವುದು ಜೀ- ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ
--------------
ಜನ್ನ
ಬಳೆಗೋದುದು ಕೀರ್ತಿದಿಶಾ ಕಳಭಂಗಳ ನಿಗ್ಗವಂಗಳೊಳ್‌ ರಿಷುಕಾಂತಾ ವಳಿಯೊಳ್‌ ಭವತ್ಪತಾಪಂ ಬಳೆಗಳೆಯಿಸೆ ತಾನದಕ್ಕೆ ಮಚ್ಚರಿಸುವವೊಲ್‌
--------------
ಜನ್ನ
ಬಸಿದಪುದು ಮೆಯ್ಯ ರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್‌ ಬಸನಿಗತನಮಂ ಮಾಣ್ಬೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
--------------
ಜನ್ನ
ಬಿನದಕ್ಕೆ ಪಾಡುತ್ತಿರೆ ನು ಣ್ಣನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋ ಚನೆ ತಿಳಿದಾಲಿಸಿ ಮುಟ್ಟಿದ ಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್‌
--------------
ಜನ್ನ
ಬೆದೆಯಾದ ತಾಯನೇಣಜೆ- ತ್ತದು ಸೊರ್ಕಿದ ಗೂಳಿ ತಾಯನೇಚೆತ್ತೆಂಬಂ- ದದೆ ಮತ್ತದೊಮದು ಬಸ್ತಕ- ಮದನಿಜೆಯಲ್ಲ ಸತ್ತು ಪೊಕ್ಕುದಜೆಯೊಳ್‌ ಜೀವಂ
--------------
ಜನ್ನ
ಬೇಂಟೆಗೆ ನಡೆಯೆ ಯಶೋಮತಿ ಗೆಂಟಖೊಳಾರಣ್ಯವಾಸಿಗಳ್‌ ನಿಲೆ ಕಂಡಾ- ಬೇಂಟೆ ಪರಿಯದೊಡೆ ಬಿನದದ ಕಂಟಕನೀ ಸವಣನೆನುತೆ ಬರುತಂಂ ಮುನಿದಂ
--------------
ಜನ್ನ
ಬೇಡಿದ ಕಾಡೊಳ್‌ ಮಲೆವೆಯಾ ಯ್ತೀಡಾಡುವಮಿದಆ ಪೊೌಯನೆನಗಂ ನಿನಗಂ ಮೂಡುವ ಮುಖುಗುವ ದಂದುಗ- ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
--------------
ಜನ್ನ
-->