ಒಟ್ಟು 796 ಕಡೆಗಳಲ್ಲಿ , 1 ಕವಿಗಳು , 280 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲವಾದೊಡೆ ರೂಪಿನ ಕೋ ಟಲೆಯೇವುದೊ ಕಾರ್ಯಮಾಗೆ ಕಾರಣದಿಂಂದಂಂ ಫಲಮೇನಿಂದೆನಗಾತನೆ ಕುಲದೈವಂ ಕಾಮದೇವನಿಂದ್ರಂ ಚಂದ್ರಂ
--------------
ಜನ್ನ
ಒಲಿಸಿದ ಪೆಣ್‌ ಪೆಅರೊಳ್‌ Ao ಚಲಿಸಿದೊಡಿದು ಸುಖಮೆ ಪರಮಸುಖಸಂಪದಮಾ ಸಲಿಸಿ ಸಲೆ ನೆರೆವ ಮುಕ್ತಿಯ ನೊಲಿಸುವೆನಿನ್ನೊಳ್ಲೆನುಟುದ ಪೆಂಡಿರ ನಣ್ಣಂ
--------------
ಜನ್ನ
ಕಂ॥ ಪುರುದೇವಾದಿಗಳೊಲಿಸಿದ ಪರಮಶ್ರೀವಧುವನೊಲಿಸಿಯುಂ ಪರವನಿತಾ ನಿರಪೇಕ್ಟಕನೆನಿಸಿದ ದೇ- ವರದೇವಂ ಕುಡುಗೆ ಸುವ್ರತಂ ಸುವ್ರತಮಂ
--------------
ಜನ್ನ
ಕಂತುವಿನ ಕಯ್ಯ ಕೂರಸಿ ಯಂತಿರೆ ಗರಗರಿಕೆವಡೆದು ಪೊಳೆವಸಿಯಳೆ ನೀ ನಿಂತಪ್ಪ ಕಾಮದೇವಂ ಗಂತೆಂತಾಯ್ದಅಸಿ ಕೂರ್ತೆಯೆಂದಾನಣುಯೆಂ
--------------
ಜನ್ನ
ಕಜ್‌ದೊವಲ ಪಟಿಯ ಕಟಿಯಂ ತೆದಂದದ ಮೆಯ್ಯ ನಾತಮಾತನ ಕಯ್ಗಳ್‌ ಕುಜುಗಣ್ಣು ಕೂನಬೆನ್‌ ಕಾಲ್‌ ಮಂ*ಯಿಸುವುದು ಟೊಂಕಮುಖಿದ ಕತ್ತೆಯ ಕಾಲಂ
--------------
ಜನ್ನ
ಕಟಲೆ ನಿಜಹರ್ಷಬಾಷ್ಟದ ಮಣ್‌ಿವನಿ ಧರ್ಮಾನುರಾಗ ಮೇಘದ್ವನಿವೊಲ್‌ ಮೊಟಗುವಿನುಅಂಕೆಯ ಪೊಯಿಲ್‌ ಫಟೆಲನೆ ಕೂಗಿದುವು ಕೇಳ್ದನಿತ್ತ ನೃಪಾಲಂ
--------------
ಜನ್ನ
ಕಡಿದು ಕಿಖೆಕಿಚೆದನಲುವಂ ಪುಡಿಗುಟ್ಟಸಿ ತೊವಲನುಗಿದು ಕರುಳ ತೊಡಂಕಂ ಬಿಡಿಸಿ ನಡೆ ನೋಟ್ಟೆನೊಳಗೆ- ಲ್ಲಡಗಿರ್ಪುದು ಜೀವನಿರ್ಪೊಡೆಲ್ಲಿಗೆ ಪೋದಂಂ
--------------
ಜನ್ನ
ಕಡೆಗಣ್ಗಳ್‌ ಕೇದಗೆಯಂ ಪಡೆದುವು ಮಲ್ಲಿಗೆಗೆ ಸೆಳ್ಳುಗುರ್‌ ಸಂಂಪಗೆಯಂ ಪಡೆದುವು ಪಾದರಿಗೆನೆ ಸಂ- ಗಡರಿಂಂದಲರ್ಗೊಯ್ವ ವಾರವನಿತೆಯರೆಸೆದರ್‌
--------------
ಜನ್ನ
ಕಡೆಯೊಳ್‌ ಕೋಣನ ಪೋರ್ಕುಳಿ ಗಿಡುವಿಗೆ ಮಿತ್ತೆಂಬ ತೆಅದೆ ಪರದನ ಬೀಡಂ ಬಿಡೆ ಸೂಹೌಗೊಂಡು ತನ್ನಂ ಪಿಡಿತರಿಸಿ ವಿಚತ್ರಮಪ್ಪ ಕೊಲೆಯಂ ಕೊಂದಂ
--------------
ಜನ್ನ
ಕನ್ನರನಾದರದಿಂ ಕುಡೆ ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ ಮನ್ನಿಸಿ ಬಲ್ಲಾಳಂ ಕುಡೆ ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್‌
--------------
ಜನ್ನ
ಕರಮೆಸೆಯೆ ಸಮೆದು ಬಂದುದು ಚರಣಾಯುಧಮದಳಣ ಚಿತ್ರಪರಿಶೋಭೆಗೆ ಬೆಂ ತರನೊಂದಾಶ್ರಯಿಸಿರ್ದುದು ಪರಸಿದಳುಗ್ಗಡಿಸಿ ಜನನಿ ಪುತ್ರಂ ಪೊಯ್ದಂ
--------------
ಜನ್ನ
ಕರಮೇಜ್ಸ್‌ಯುಳ್ಳ ಪಿಳ್ಳೆಗ- ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ- ದರನಿತ್ತು ಚಂಡಕರ್ಮಂ- ಗರಸನವಂ ನೋಡಿ ಸಲಹು ನೀನೆಂದಿತ್ತಂ
--------------
ಜನ್ನ
ಕರಹಟದೊಳ್‌ ಬೇಂಟೆಯ ಕು- ಕ್ಯುರಿಯಾದಳ್‌ ಸತ್ತು ಚಂದ್ರಮತಿಯುಂ ಬಟೆಕಾ- ಯೆರಡುಮುಪಾಯನ ಘಟನೆಯಿ- ನರಮನೆಯಂ ಸಾರ್ದುವಾ ಯಶೋಧರಸುತನಾ
--------------
ಜನ್ನ
ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಂಗಳಂ ಕೊಂಕಿದೊಡೇಂ ಸ್ಮರಚಾಪಮನಿಳಿಕಯ್ದೆರೆ ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್‌
--------------
ಜನ್ನ
ಕಲ್ಲೊಳ್‌ ಪೊನ್‌ ಪಾಲೊಳ್‌ ಘೃತ- ಮಿಲ್ಲೆನವೇಡುಂಟು ದೇಹದೊಣಗಾತ್ಮನದೇ- ಕಿಲ್ಲ ಕುರುಡಂಂಗೆ ತೋಣದೊ- ಡಿಲ್ಲಪ್ಪದೆ ವಸ್ತು ಭೇದಿಪಂಗಾತ್ಮನೊಳಂ
--------------
ಜನ್ನ
-->