ಒಟ್ಟು 183 ಕಡೆಗಳಲ್ಲಿ , 1 ಕವಿಗಳು , 125 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೋಡುವ ಕಣ್ಣಳ ಸಿರಿ ಮಾ- ತಾಡುವ ಬಾಯ್ಗಳ ರಸಾಯನಂ ಸಂತಸದಿಂ ಕೊಡುವ ತೋಳ್ಗಳ ಪುಣ್ಯಂ ನಾಡಾಡಿಯ ರೂಪೆ ಕುವರ ವಿದ್ಯಾಧರನಾ
--------------
ಜನ್ನ
ನೋಡುವ ಮಾತಾಡುವ ಬಾ ಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂ ಪಾಡಟಲಿಯುತ್ತಿರೆ ನೋಡಲ್‌ ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್‌
--------------
ಜನ್ನ
ಪದವಿಯ ರೂಪಿನ ಸೊಬಗಿನ ಮದಮಂ ಮಾಡುವರ ಮೂಗಿನೊಳ್‌ ಪಾತ್ರಮನಾ ಡದೆ ಮಾಣದನಂಗನ ಕೃತಿ ಸುದತಿಯರ ವಿಕಾರಮೆಂಬ ವಿದ್ಯಾಬಲದಿಂ
--------------
ಜನ್ನ
ಪರಮಾತ್ಮ ನೆನ್ನನೆಂದೊಡೆ ಚರಮಾಂಗಪ್ರಮಿತನಖಿಲಲೋಕ ಸಮಾನಂ ನಿರವಯವಂ ನಿತ್ಯಂ ನಿ- ರ್ದುರಿತನನಂತ ಪ್ರಬೋಧದರ್ಶನ ಸೌಖ್ಯಂ
--------------
ಜನ್ನ
ಪರೆವುದು ದುರಿತತಮಿಸ್ರಂ ಪೊರೆಯೇಜುದಮಳದೃಷ್ಟಿಕುವಳಯ ವನಮಾ- ಚರಿಪ ಜನಿಕ್ಕೆ ಯಶೋಧರ ಚರಿತ ಕಥಾಶ್ರವಣಮೆಂಂಬ ಚಂದ್ರೋದಯದೊಳ್‌
--------------
ಜನ್ನ
ಪುರ್ವೆಂಬ ಜವಳಿಗಟ್ಟಿನ ಕರ್ವಿನ ಬಿಲ್ಲಿಂಗೆ ಬಿಗಿದ ಮಧುಕರಮಾಲಾ ಮೌರ್ವಿಯೆನೆ ಮುಗಿದ ಕಣ್ಗಳ ಪರ್ವುಗೆಯೊಳ್‌ ಮೆಳೌದುದವರ ತಳ್ಳೆಮೆದುಜುಗಲ್‌
--------------
ಜನ್ನ
ಪೊಂಬಾಟ್‌ ಚಾಮರಂ ಚಂ ದ್ರಂ ಬೆಳ್ಗೊಡೆ ಕೇಳಿಶಿಖರಿ ಸಿಂಹಾಸನಮಾ- ಯ್ನೆಂಬಿನೆಗಮಂಗಜಂ ಮಾ- ಕುಮಾರಂಗೆ ಪಟ್ಟಮಂ ಕಟ್ಟಿಸಿದಂ
--------------
ಜನ್ನ
ಪೋದಿರುಳಿನ ಕಿತ್ತಡಮಾ ಮೂದಲೆಯಾಗಿಂತು ನುಡಿದೊಉುಟೆದುದನಉಣುದಾ ಪಾದರಿ ಬೇಸತ್ತವೊಲಿರೆ ಪೋದಂ ಬಗೆ ಕದಡಿ ತಾಯ ಪೊರೆಗೆ ನೃಪೇಂದ್ರಂ
--------------
ಜನ್ನ
ಬಸಿದಪುದು ಮೆಯ್ಯ ರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್‌ ಬಸನಿಗತನಮಂ ಮಾಣ್ಬೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
--------------
ಜನ್ನ
ಬಾಳಲರ್ಗುಡಿ ಪಿಕರುತಿ ಬಾ- ಯ್ಯೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ ಪಾಳಂ ಬರೆ ಶೋಧಿಪ ವನ- ಪಾಳನವೊಲ್‌ ಮುಂದೆ ಬಂದುದಂದು ವಸಂಂತಂ
--------------
ಜನ್ನ
ಬಿನದಕ್ಕೆ ಪಾಡುತ್ತಿರೆ ನು ಣ್ಣನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋ ಚನೆ ತಿಳಿದಾಲಿಸಿ ಮುಟ್ಟಿದ ಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್‌
--------------
ಜನ್ನ
ಬೆನ್ನೊಳೆ ಪೋದಂ ದೋಷದ ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ ಚ್ಛನ್ನದಿನುರ್ಚಿದ ಬಾಳ್ವೆರ ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
--------------
ಜನ್ನ
ಬೇಡಿದ ಕಾಡೊಳ್‌ ಮಲೆವೆಯಾ ಯ್ತೀಡಾಡುವಮಿದಆ ಪೊೌಯನೆನಗಂ ನಿನಗಂ ಮೂಡುವ ಮುಖುಗುವ ದಂದುಗ- ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
--------------
ಜನ್ನ
ಭಲರೆ ನೃಪೇಂಂದ್ರಾ ದಯೆಯೊಳ್‌ ನೆಲೆಗೊಳಿಸಿದೆ ಮನಮನಮಮ ನೀನ್‌ ಕೇಳ್ದುದು ಸ ತ್ಫಲಮಾಯ್ತು ಧರ್ಮಪಥದೊಳ್‌ ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
--------------
ಜನ್ನ
ಭೈರವನ ಜವನ ಮಾರಿಯ ಮೂರಿಯವೋಲ್‌ ನಿಂದ ಮಾರಿದತ್ತಂ ಲಲಿತಾ- ಕಾರರ ಧೀರರ ಬಂದ ಕು ಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
--------------
ಜನ್ನ
-->