ಒಟ್ಟು 123 ಕಡೆಗಳಲ್ಲಿ , 1 ಕವಿಗಳು , 102 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುಳಿದಾಕೆ ತಂದ ಮಾಲಾ ಮಳಯಜ ತಾಂಂಬೂಲಜಾಮಂ ಕೆದಅು ಕುರು ಳ್ಗಳನೆಯೆದು ಬೆನ್ನ ಮಿಳಿಯಿಂ ಕಳಹಂಸೆಗೆ ಗಿಡಗನೆಅಗಿದಂತಿರೆ ಬಡಿದಂ ರ್ಳ
--------------
ಜನ್ನ
ಮೇರು ನೃಪ ಪ್ರಾಸಾದಂ ವಾರಧಿ ನಿಜಪರಿಖೆ ವಜ್ರವೇದಿಕೆ ತತ್‌ಪ್ರಾ- ಕಾರಂ ಜಂಬೂದ್ವೀಪಾ ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ
--------------
ಜನ್ನ
ರತಿವೆರಸು ಮನಸಿಜಂ ಬನ- ದತಿಶಯಮಂ ನೋಡಲೆಂದು ಬರ್ಪಂತೆ ಯಶೋ- ಮತಿ ಕುಸುಮಾವಳಿವೆರಸು- ನ್ನತಪೀತಚ್ಛತ್ರನಂದನಂ ನಡೆತಂದಂ
--------------
ಜನ್ನ
ಲಂಪಣನವೊಲೇನಾನುಮ ಲಂಪಿನ ನಗೆನುಡಿಯ ನೆವದೆ ನೆಯ್ಬಿಲ ಪೂವಿಂ ದಂ ಪೊಯ್ಯೆ ಮೂರ್ಛೆವೋದಳ್‌ ಸಂಪಗೆಯಲರ್ಗಂಪು ಪೊಯ್ದ ತುಂಬಿಯ ತೆಅದಿಂದ
--------------
ಜನ್ನ
ವರಮಂಂಚ ಮಣಿದ್ಯುತಿಧೃತ ಮರಾಳಿಕಾತೂಳತಳ್ಟದೊಳ್‌ ತಾಮೆಸೆದರ್‌ ಸುರಚಾಪಚ್ಛವಿ ಸುತ್ತಿದ ಶರದಭ್ರದೊಳೆಸೆವ ಖಚರದಂಪತಿಗಳವೊಲ್‌
--------------
ಜನ್ನ
ವಿಸರುಹದಂತೆ ಕೇಸರಮನಾಂತುದು ಮೆಯ್ಗಲಿಯಂತಿರಾರೆ ಕೂ- ರ್ಪೆಸೆದುದು ಚಾಗಿಯಂತೆ ನೆ೫್‌ೌ ಕೊಟ್ಟೆಸೆದೊಪ್ಪಿತು ರಾಧೆಯಂತೆ ಸಂ. ದಿಸಿ ಮುಡಿ ಮೇಲೆ ಕೊಂಕಿದುದು ಚಂದ್ರಮನಂತೆ ಸುಪಕ್ಷದಿಂದೆ ರಂ- ಜಿಡಿದುದು ಪುಂಜನಗ್ಗದ ಸುವಸ್ತುವಿನಂತಿರೆ ತಳ್ತು ಹೇಂಟೆಯೊಳ್
--------------
ಜನ್ನ
ವೀರತಪಸ್ವಿ ಯಶೌಘಮ- ಹಾರಾಜಂಂ ನೋನ್ತು ಕಟಿದು ಸುರವರವನಿತಾ ಸೇರಕಟಾಕ ನಿರೀಕಣ ಕೈರವಶೀತಾಂಂಶುದೇವನಾದಂ ದಿವದೊಳ್‌
--------------
ಜನ್ನ
ಶ್ರಾವಕಜನದುಪವಾಸಂ ಜೀವದಯಾಷ್ಟಮಿಯೊಳಾಗೆ ಪಾರಣೆ ಕಿವಿಗ- ಳ್ಲೀವಸ್ತು ಕಥನದಿಂದು- DQ oA ಕವಿಭಾಳಲೋಚನಂ ವಿರಚಿದಂ
--------------
ಜನ್ನ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ- ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ- ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂ ಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
--------------
ಜನ್ನ
ಸಜ್ಜನ ಚೂಡಾಮಣಿ ತ- ಮ್ಮಜ್ಜಂಗಂ ಪುಣ್ಯದಿಂದೆ ಸಾಸಿರ್ಮಡಿಯಾ- ಗುಜ್ಜಳಿಕೆವಡೆದ ಪೆರ್ಮೆಯೊ ಳುಜ್ಜೇನಿಯೊಳರಸುಗೆಯ್ಯುತಿರ್ದಂ ಸುಖದಿಂ
--------------
ಜನ್ನ
ಸಳನೆಂಬ ಯಾದವಂ ಹೊಯ್‌ ಸಳನಾದಂ ಶಶಕಪುರದ ವಾಸಂತಿಕೆಯೊಳ್‌ ಮುಳಿದು ಪುಲಿ ಪಾಯ್ವುದುಂ ಹೊಯ್‌ ಸಳ ಎಂದೊಡೆ ಗುರುಗಳಿತ್ತು ಕುಂಚದ ಸೆಳೆಯಂ
--------------
ಜನ್ನ
ಸೊಡರಿಂ ಮುಡುಪಿಂದಂ ಪಿಂ- ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂ ನೆಣಮುರ್ಚೆ ಬೆಂಕಿಯಿಂ ಕೆಳ ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ
--------------
ಜನ್ನ
-->