ಒಟ್ಟು 194 ಕಡೆಗಳಲ್ಲಿ , 1 ಕವಿಗಳು , 147 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿಯರ ಪರಕೆಯಿಂದೆನ ಕೊಅತೆಯಿಲ್ಲ ಪೋದಿರುಳೊಳ್‌ ಪೊಂ ದಾವರೆಗೊಳದಂಚೆ ಕಟ ಲ್ಹಾವರೆಗೊಳದೊಳಗೆ ನಲಿವಕನಸಂಂ ಕಂಡೆಂ
--------------
ಜನ್ನ
ದೈವದಿನೆಂತಕ್ಕಿಂದಿನ ಸಾವೋಸರಿಸಿದುದು ಕರ್ಣಭೂಷಾವಳಿ ಭೂ ಷಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ
--------------
ಜನ್ನ
ಧೀರನಿಧಿ ಬಿಟ್ಟಿದೇವನೊ- ಳೋರಗೆ ಬಲ್ಹಾಳನಿಂತು ನರಸಿಂಹಸುತಂಂ- ಗಾರೆಣೆ ಗಗನಂ ಗಗನಾ- ಕಾರಮೆನಲ್‌ ತಮ್ಮೊಳೆಣೆ ಪಿತಾಮಹ ಪೌತ್ರರ್‌.
--------------
ಜನ್ನ
ನದಿ ಕಣ್ಣೆಆೌದಂತೆ ಪೊಳಂ ಕಿದ ಮೀನಂ ಮೊಸಳೆ ಪಾಯೆ ನರಪತಿಯ ವಿನೋ- ದದ ಗುಜ್ಜ ಸಿಕ್ಕೆ ಪಿಡಿದ- ತ್ರದನಧಿಪತಿ ಜಾಲಗಾಅರಿಂ ತೆಗೆಯಿಸಿದಂ
--------------
ಜನ್ನ
ನವರತ್ನದ ಪಂಂಜರದೊಳ್‌ ದಿವಿಜ ಶರಾಸನದ ಮಜೆಯನಿರಿಸಿದವೋಲೆ- ತ್ತುವ ಸೋಗೆಯ ಸುತ್ತಿನೊಳಾ- ಡುವ ಕೇಕಿಯ ಭಂಗಿ ಲೋಕಮಂ ಸೋಲಿಸುಗಂಂ
--------------
ಜನ್ನ
ನಾಂದಿಯಿನನಂತರಂ ಕವಿ ವೃಂದಾರಕವಾಸವಂಗೆ ಕವಿಕಲ್ಪಲತಾ ಮಂದಾರಂಗೇಂಂ ಪ್ರಸ್ತುತ ಮೆಂದೊಡೆ ಬಲ್ದಾಳದೇವನನ್ವಯಕಥನಂ
--------------
ಜನ್ನ
ನಿಂದು ನರಪತಿ ತಳಾಅಂ ಗೆಂಂದಂ ನೀನ್‌ ಬರಿಸು ಮನುಜಯುಗಮಂಂ ಮುನ್ನಂ ಕೊಂದರ್ಚಿಸುವೆಂ ಪೂಜೆಯೊ- ಳೆಂದಿನ ಪರಿ ತಪ್ಪೆ ದೇವಿ ತಪ್ಪದೆ ಮಾಣಳ್‌
--------------
ಜನ್ನ
ನಿನಗೆ ಶುಭವೆಂದ ವಂದಿಯ ಮನೆಯಂಗಣದೊಳಗೆ ಪಣ್ತ್ಮು ಪರ್ವಿದ ಮಂದಾ ರ ನಮೇರು ಪಾರಿಜಾತದ ಬನದೊಳ್‌ ಸಿರಿ ಮೆಣೌವುದಲ್ತೆ ವನಕೇಳಿಗಳಂ
--------------
ಜನ್ನ
ನಿಯತಿಯನಾರ್‌ ಮೀಜತವೆದಪರ್‌ ಭಯಮೇವುದೊ ಮುಟ್ಟಿದೆಡೆಗೆ ಸೈರಿಸುವುದೆ ಕೇಳ್‌ ನಯವಿದೆ ಪೆತ್ತ ಪರೀಷಹ ಜಯಮೆ ತಪಂ ತಪಕೆ ಬೇಆ್‌ ಕೋಡೆರಡೊಳವೇ
--------------
ಜನ್ನ
ನುಣ್ಣುರುಳ ಪೊಳೆವ ಕಪ್ಪುಂ ಕಣ್ಣಗ್ಗಳಮಾದ ಮೆಯ್ಯ ಬೆಳಗೆಸೆವಿನಮಾ ಪೆಣಂಡು ರಾಜಲಕಿಯ ಕಣ್ಗಳ ದೊರೆಯಾಗಿ ಸುಮನೆ ಬಳೆವಿನಮಿತ್ತಲ್‌
--------------
ಜನ್ನ
ನೆಗಟ್ಬ ನೃಪರೊಳಗೆ ಮುಂ ಕವಿ- ತೆಗೆ ಮುಂಜಂ ಭೋಜನುತ್ಪಲಂ ಶ್ರೀಹರ್ಷಂ ಮಿಗಿಲವರಿಂ ಬಲ್ದಾಳಂ ದ್ವಿಗುಣಂ ತ್ರಿಗುಣಂ ಚತುರ್ಗುಣಂ ಪಂಚಗುಣಂ
--------------
ಜನ್ನ
ನೋಡುವ ಮಾತಾಡುವ ಬಾ ಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂ ಪಾಡಟಲಿಯುತ್ತಿರೆ ನೋಡಲ್‌ ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್‌
--------------
ಜನ್ನ
ಪಕ್ವಾನ್ನಮೆ ಮೃತಿಗು- ೇಪನಪಿಂಡದವೊಲಾಗೆ ಅಘದಿಂ ಬೀಜಾ- ವಾಪಮೆನೆ ಜನ್ಮಲತೆಗೆ ಕ- ಲಾಪಿಸ್ತೀಯುದರದಲ್ಲಿ ವಿಂಧ್ಯದೊಳೊಗೆದಂ
--------------
ಜನ್ನ
ಪರನೃಪರ ರಾಜ್ಯಲಕ್ಷ್ಮಿಯ ಕುರುಳಾಕರ್ಷಣದೆ ನೀಳ್ಬ ತೋಳ್‌ ಮೆಉೌವುದು ಪೇ ರುರದೊಳ್‌ ನೆಲಸಿದ ಲಕ್ಷ್ಮಿ ಕರಿಣಿಗೆ ಬಾಳಿಸಿದ ರನ್ನದಮಳ್ಗಂಬದವೊಲ್‌
--------------
ಜನ್ನ
ಪರನೃಪರನಲ್ಲದೀ ಪುಮಿ ಕರನಅಂವುದೆ ಮದ್ಭುಜಾಸಿಯಿದು ಕೈಯಿಕ್ಕಲ್‌ ಕರಿ ಕರಿಗಲ್ಲದಿಉಂಪೆಗೆ ಪರಿವುದೆ ಹರಿ ಕರಿಯನಲ್ಲದಿಅಿವುದೆ ನರಿಯಂ
--------------
ಜನ್ನ
-->