ಒಟ್ಟು 183 ಕಡೆಗಳಲ್ಲಿ , 1 ಕವಿಗಳು , 141 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿಂದು ಬೆಸಸೆ ಭಿಕ್ಷೆಗೆ ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
--------------
ಜನ್ನ
ಗೋದಾಮೆಗಂಡ ನವಿಲಂ ತಾದುದು ಕಾರ್ಗಂಡ ಹಂಸನವೊಲಾದುದಲರ್‌ ವೋದ ಲತೆಗಂಡ ವಿರಹಿವೊ ಲಾದುದು ದುರ್ನಯದ ಕಾಣ್ಮೆಗೆನ್ನಯ ಚಿತ್ತಂ
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ಜೀವದಯೆ ಜೈನಧರ್ಮಂ ಜೀವಹಿತಂ ನಂಬುವವರ್ಗೆ ಹಿಂಸೆಯ ಮೋಹಂ ಭಾವಿತಮೆ ತಪ್ಪಿನುಡಿದಿರ್‌ ಕಾವರೆ ಕಣೆಗೊಳ್ವೊಡಬ್ಬೆ ಬಾರಿಪರೊಳರೇ
--------------
ಜನ್ನ
ತಜೌದೊಡೆ ಕಡೆದೊಡೆ ಸೀಳ್ದೊಡೆ ಪೊಜಮಡುವುದೇ ಕಿಚ್ಚು ಕಾಷ್ಠದಿಂ ಪೊಸೆಯಲೊಡಂ ಪೊಃ೫ಮಡುವುದಂತೆ ಜೀವಂ ಪೆಅತೊಡಲಿಂ ತೋಹುಗುಂ ವಿವೇಕಕ್ರಿಯೆಯಿಂ
--------------
ಜನ್ನ
ತನಗರಸುವೆರಸು ಪುರಜನ ಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾ- ರ್ಚನೆವೆರಸು ಜಾತ್ರ ನೆರೆಯದೊ- ಡನಿತುಮ ನೊರ್ಮೊದಲೆ ವಿಳಯದೊಳ್‌ ನೆರೆಯಿಸುವಳ್‌
--------------
ಜನ್ನ
ತನುಸೋಂಕಾಲಿಂಗನ ಚುಂ ಬನದೆ ಸುರತದಿಂ ಸವಿ ರತಪ್ರೌಢಿಯಿನಾ ತನುವಂ ಮ್‌ೌಯಿಸೆ ಅಣಿಯದೆ ಮನೋಜನಾಡಿಸುವ ಜಂತ್ರದಂತಿರೆ ನೆರೆದರ್‌
--------------
ಜನ್ನ
ತವಗಂಂಜುವವರ್ಗೆ ತಾವಂ ಜುವರೆಂಜಲನಾಯ್ಬು ತಿಂಬರೆಂಜಲ ತಾವ್‌ ತಿಂ ಬವನಿಪರಾದಲ್ಲಿಯೆ ನಾಯ್‌ ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ
--------------
ಜನ್ನ
ತಾನಂದುವರೆಗಮೊದವಿಸಿ ದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ- ತ್ರೀನಾಥಪದವಿಯಂ ಕೊ- ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
--------------
ಜನ್ನ
ತಾರಾತಾರಾ ಧರಾಧರ ತಾರಾ ದರತಾಹಾರ ನೀಹಾರ ಪಯಃ ಪೂರ ಹರಹಸನ ಶಾರದ ನೀರದ ನಿರ್ಮಲ ಯಶೋಧರಂಂ ಕವಿತಿಲಕಂ
--------------
ಜನ್ನ
ತೀವಿದ ತಿದಿಯಂ ತೂಗಿಯು- ಮಾ ವಾಯುವನಿಳೆಪಿ ತೂಗಿಯುಂ ಸರಿ ತಿದಿಯಿಂ- ದಾ ವಾಯು ಬೇಳೆ ತನುವಿಂಂ ಜೀವಂ ಬೇಜೆಂದು ಮಗನೆ ಭಾವಿಸಿ ನೋಡಾ
--------------
ಜನ್ನ
ತೂಗಿಸಿ ತೊಲೆಯೊಳ್‌ ಬಾಯಂ ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ ತೂಗಿದೊಡೆ ಕುಂದದಾತ್ಮವಿ- ಭಾಗಂ ಬೇಹ್‌ಲ್ಲ ಜೀವನೆಂತುಂ ದೇಹಂ
--------------
ಜನ್ನ
ತೆರೆಮುಗಿಲನಡರ್ವ ವಿದ್ಯಾ- ಧರಿಯೆಂಬಿನಮೊರ್ವಳೇಉಖೆ ಕೃತಕಾದ್ರಿಯನೇಂ ದೊರೆಯಾದಳೊ ರತಿನಾಥನ ಕರುಮಾಡದ ಮದನಮೋಹಿನೀ ಪುತ್ರಿಕೆವೊಲ್‌
--------------
ಜನ್ನ
ತೊನ್ನ ಕೂಟದಿನಾದುದು ತೊನ್ನೀ ರೋಗಕ್ಕೆ ಬಾಡು ಕಳ್‌ ವಿಷಮೆನೆಯುಂ ಮನ್ನಿಸಳೆ ಮಗನ ಮಾತನಿ- ದೇಂ ನಾಯಕನರಕಮೀಕೆಗೊಚ್ಚತಮಾಯ್ತೋ
--------------
ಜನ್ನ
ತೋರಮುಡಿವಿಡಿದು ಕುಡಿಯಂ ನಾರಂ ತದೆವಂತೆ ತದೆದು ಬೀಟೆಯ ಕಾಲಿಂ ಬಾರೇಟ* ಬದಗನೊದೆದೊಡೆ ಕೇರೆ ಪೊರಳ್ಜ್ಹಂತೆ ಕಾಲಮೇಲೆ ಪೊರಳ್ಬಳ್‌
--------------
ಜನ್ನ
-->