ಒಟ್ಟು 200 ಕಡೆಗಳಲ್ಲಿ , 1 ಕವಿಗಳು , 146 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗಹಗಹಿಕೆವಡೆದ ವಹಿಣಿಯಸುಹಾಹೆ ರುಂಪೆಯದೊಳಮರೆ ಠಾಯದೊಳಂಂ ನಿರ್ವಹಿಸಿ ನೆಲೆಗೊಳಿಸಿ ಬಯ್ಲಿಕೆಮಹಚಾಳೆಯದಲ್ಲಿ ಮೂರ್ತಿವಡೆದುದು ರಾಗಂ
ಗುಡುಗುಡನೆ ಸುರಿವ ಕಣ್ಣನಿ-ಯೊಡವಂದಶುಭಕ್ಕೆ ಮಂಗಳಸ್ನಾನಮಂ-ದೊಡರಿಸೆ ಸೋದರ ಶಿಶುಗಳ-ನೊಡಲೊಳ್ ಮಡಗುವಿನಮಪ್ಪಿ ಬೆಚ್ಚನೆ ಸುಯ್ದಂ
ಗುರುಬಿಟ್ಟ ರಾಜ್ಯಲಕ್ಷ್ಮಿಗೆವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್ನೆರೆದಿರ್ಪುದಲ್ಲದೆಂಬಂತಿರೆ ಪೋದಳ್ ಕೀರ್ತಿಕಾಂತೆ ದೆಸೆಯೆಂತುವರಂ
ಗುರುವಿಂದು ಬೆಸಸೆ ಭಿಕ್ಷೆಗೆಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂಪುರುಳಿಲ್ಲ ನಿನ್ನಕೇಡಂಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
ಚದುರ ನಿಧಿ ಚಲದ ನೆಲೆ ಚಾಗದ ಸಾಗರಮಣ್ಮಿನಾಗರಂ ಪೆಂಪಿನ ಸಂ-ಪದಮಾಯದಾಯುವಾರೆಂ-ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
ಚಲದ ಬಲದೆಸಕದಿಂ ಸಲೆನಿಲೆ ನಾಲ್ಕುಂ ದೆಸೆಯ ಮೂಜುವರೆ ರಾಯರ ಮುಂಂ-ದಲೆಯೊಳಗುಂದಲೆಯೆನೆ ನಿಂ-ದಲೆವುದು ತೇಜಂ ಪ್ರತಾಪ ಚಕ್ರೇಶ್ವರನಾ
ಜನಕಂ ಯಶೋಧರಂ ಪಿ-ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ-ಡಿನ ಪೋರಿ ಪೋಂತು ಕುಕ್ಕುಟ-ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
ಜವಳಿವೇ*ೆ ಮನುಜರೂಪದಿ-ನವನಿಯೊಳೊಗೆದಂತೆ ಕಾಂತಿ ಮೆ೫ೌದಪುದಿಂದಿಂ-ತಿವರ್ಗಳ ಚೆಲ್ಚಿಕೆ ಕಣ್ಗಳತವರಾಜಮನಿಂದು ಕಂಡೆನೀ ಬಾಲಕರಂ
ಜಿನಸಿದ್ಧ ಸೂರಿದೇಶಿಕಮುನಿಗಳ ಚರಣಂಗಳೆಂಬ ಸರಸಿಜವನಮೀಮನಮೆಂಬ ತುಂಬಿಯೆಜಕಮ-ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
ತನಗರಸುವೆರಸು ಪುರಜನಮನಿತುಮಿಷಂ ಚೈತ್ರಮೆಂಬ ತಿಂಗಳೊಳಖಿಳಾ-ರ್ಚನೆವೆರಸು ಜಾತ್ರ ನೆರೆಯದೊ-ಡನಿತುಮ ನೊರ್ಮೊದಲೆ ವಿಳಯದೊಳ್ ನೆರೆಯಿಸುವಳ್
ತರಿಸಿ ಪರಿಶುದ್ದಿ ಗೆಯ್ದದ-ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ-ಧರ ಚಂದ್ರಮತಿಗಳೊಸೆದು-ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್
ತಲೆಯಿಂ ಕುಕ್ಕೂಕೂ ಎಂಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬಲ್ಲುಲಿಯೆನೆ ಪಿಟ್ಟಿನ ಕೋಟೆಯತಲೆಯಂ ಹಿಡಿವಂತಿರಟ್ಟೆ ಪಾಣಿದುದಿನಿಸಂ
ತಳಿರ್ಗಳ ಚಾಳೆಯಮೆಳಲತೆ-ಗಳ ಲುಳಿ ಶಿಳಿಗೊಲದ ತೆರೆಯ ತಾಳಂ ಪೊಸವೂ-ಗಳ ನೋಟಮಾಗೆ ನೃಪನಂಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ
ತವಗಂಂಜುವವರ್ಗೆ ತಾವಂಜುವರೆಂಜಲನಾಯ್ಬು ತಿಂಬರೆಂಜಲ ತಾವ್ ತಿಂಬವನಿಪರಾದಲ್ಲಿಯೆ ನಾಯ್ನವಿಲಪ್ಪನಿತಾಯ್ತು ನೋಡ ಪಾಪದ ಫಲದಿಂ
ತಾರಾತಾರಾ ಧರಾಧರತಾರಾ ದರತಾಹಾರ ನೀಹಾರ ಪಯಃಪೂರ ಹರಹಸನ ಶಾರದನೀರದ ನಿರ್ಮಲ ಯಶೋಧರಂಂ ಕವಿತಿಲಕಂ