ಒಟ್ಟು 156 ಕಡೆಗಳಲ್ಲಿ , 1 ಕವಿಗಳು , 115 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿಂತು ಬೆಸಸೆ ಜಾತಿ ಸ್ಮರಂಗಳಾಗಿರ್ದು ಪಕ್ಕಿಗಳ್‌ ಕೇಳ್ಬೆರ್ದೆಯೊಳ್‌ ಪರಮೋತ್ಸವದಿಂ ವ್ರತಮಂ ಧರಿಯಿಸುತಿರೆ ಚಂಡಕರ್ಮನುಂ ಧರಿಯಿಸಿದಂಂ
--------------
ಜನ್ನ
ಗುರುವಿಂದು ಬೆಸಸೆ ಭಿಕ್ಷೆಗೆ ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
--------------
ಜನ್ನ
ಜಿನಸಿದ್ಧ ಸೂರಿದೇಶಿಕ ಮುನಿಗಳ ಚರಣಂಗಳೆಂಬ ಸರಸಿಜವನಮೀ ಮನಮೆಂಬ ತುಂಬಿಯೆಜಕಮ- ನನುಕರಿಸುಗೆ ಭಕ್ತಿಯೆಂಬ ನವಪರಿಮಳದಿಂ
--------------
ಜನ್ನ
ತಡವಾದುದುಂಟು ನಲ್ಲನೆ ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ ತೊಡೆಯೇಉ ಸಿ ಕೇಳಿಕೆಯಾ ದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ
--------------
ಜನ್ನ
ತರಿಸಿ ಪರಿಶುದ್ದಿ ಗೆಯ್ದದ- ನಿರಿಸಿದೊಡಾ ಪಾರ್ವರುಂಡು ತಣಿದೆರ್ದಯಶೋಣ- ಧರ ಚಂದ್ರಮತಿಗಳೊಸೆದು- ಣ್ದರೆ ಸಗ್ಗದ ಸುಖಮನೆಂದೊಡೋಹೋ ಎಂದರ್‌
--------------
ಜನ್ನ
ತಳಿರ್ಗಳ ಚಾಳೆಯಮೆಳಲತೆ- ಗಳ ಲುಳಿ ಶಿಳಿಗೊಲದ ತೆರೆಯ ತಾಳಂ ಪೊಸವೂ- ಗಳ ನೋಟಮಾಗೆ ನೃಪನಂ ಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ
--------------
ಜನ್ನ
ತಾನಂದುವರೆಗಮೊದವಿಸಿ ದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ- ತ್ರೀನಾಥಪದವಿಯಂ ಕೊ- ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
--------------
ಜನ್ನ
ತಾಳುಗೆಯನುರ್ಚಿ ನೆತ್ತಿಯ ಗಾಳಂ ಗಗನದೊಳೆಟಲ್ಪ ವಾರಿಯ ಬೀರರ್‌ ಪಾಳಿಯೊಳೆಸೆದರ್‌ ಪಾಪದ ಜೋಳದ ಬೆಳಸಿಂಗೆ ಬೆರ್ಚುಗಟ್ಟಿದ ತೆಅದಿಂ
--------------
ಜನ್ನ
ತೀವಿದ ತಿದಿಯಂ ತೂಗಿಯು- ಮಾ ವಾಯುವನಿಳೆಪಿ ತೂಗಿಯುಂ ಸರಿ ತಿದಿಯಿಂ- ದಾ ವಾಯು ಬೇಳೆ ತನುವಿಂಂ ಜೀವಂ ಬೇಜೆಂದು ಮಗನೆ ಭಾವಿಸಿ ನೋಡಾ
--------------
ಜನ್ನ
ತೂಗಿಸಿ ತೊಲೆಯೊಳ್‌ ಬಾಯಂ ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ ತೂಗಿದೊಡೆ ಕುಂದದಾತ್ಮವಿ- ಭಾಗಂ ಬೇಹ್‌ಲ್ಲ ಜೀವನೆಂತುಂ ದೇಹಂ
--------------
ಜನ್ನ
ದೆಸೆದೆಸೆಗೆ ನರಶಿರಂ ತೆ- ತ್ತಿಸಿ ಮೆ೫ೌದುವು ಮದಿಲೊಳಬ್ಬೆ ಪೇರಡಪಿನಪೆ ರ್ಬೆಸನದೆ ಪೊವಗಣ ಜೀವ ಪ್ರಸರಮಂ ಪಲವು ಮುಖದಿನವಳೋಕಿಪವೋಲ್‌
--------------
ಜನ್ನ
ದೇವ ಕನಸಿದು ಕರಂ ದೋ ಷಾವಹಮಿಳಿಕಯ್ಯಲಾಗ ನಿನ್ನಸಿಮುಖದಿಂ ದಾವಣಿಗುಜೆಯಂ ತಣುಿದೊಡೆ ದೇವಿ ಶುಭೇತರವಿನಾಶಮಂ ದಯೆಗೆಯ್ಗ್ಲುಂ
--------------
ಜನ್ನ
ದೈವದಿನೆಂತಕ್ಕಿಂದಿನ ಸಾವೋಸರಿಸಿದುದು ಕರ್ಣಭೂಷಾವಳಿ ಭೂ ಷಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ
--------------
ಜನ್ನ
ದೊರೆಕೊಳೆ ಸಮಾಧಿಮರಣಂ ಚರಣಾಯುಧಯುಗಳಮಟೆದು ಕುಸುಮಾವಳಿಯೆಂ ಬರಸಿಯ ಬಸಿಖೊಳ್‌ ಬಂದವು ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್‌
--------------
ಜನ್ನ
ದೊರೆವಡೆದ ಯಶೌಘನ ಭೂ ವರತಿಳಕನ ಕಣ್ಗಳಂಗರಕ್ಕರ್‌ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯನೆ ಸಂದತ್ತು ಚಂದ್ರಮತಿಗರಸಿತನಂ
--------------
ಜನ್ನ
-->