ಒಟ್ಟು 87 ಕಡೆಗಳಲ್ಲಿ , 1 ಕವಿಗಳು , 71 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬೇಡಂ ಪಿಳುಕೊತ್ತಿನ ತಾಯ್‌ ಓಡಲ್‌ ಬಿಟ್ಟಲ್ಲಿ ಪಿಡಿದು ತಂದಾ ಪಿಳುಕಂ ಬೇಡಿತಿಗೆ ಸಲಹಲಿತ್ತೊಡೆ ಗೊಡೊಳದು ಬಳೆದು ತಳೆದುದಂಗಚ್ಛವಿಯಂ
--------------
ಜನ್ನ
ಭಾವಕನತಿರಸಿಕಂ ಸಂ ಭಾವಿತನಭ್ಯಸ್ತ ಶಾಸ್ತ್ರನನ್ಹಿತನೆನಿಪಾ ದೇವಂಗೆ ವಿಷಯಮಲ್ಲದೆ ದೇವಾನಾಂಪ್ರಿಯರ್ಗೆ ವಿಷಯಮೇ ಸತ್ಯಾವ್ಯಂ
--------------
ಜನ್ನ
ಮಂದಸ್ಮಿತ ವರ ಕೌಮುದಿ ನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ ಲ್ಲಿಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲ ವದನಂ
--------------
ಜನ್ನ
ಮಣಿದೊಣಇಗಿದನಂತೆವೊಲಿರೆ ಪಣಮೆ ಪಗಲ್‌ ಮುಗಿಯೆ ಸಿಲ್ಕಿ ಕೈರವದನಿರುಳ್‌ ಪೊಜಮಡುವಂತರಸನ ತೋ ಳ್ಗೆೆಯಿಂ ನುಸುಳ್ಬರಸಿ ಜಾರನಲ್ಲಿಗೆ ಪೋದಳ್‌
--------------
ಜನ್ನ
ಮದನನ ಮಾಅಂಕದ ಚೆಂ- ದದ ಗಂಡನಮೃತದನ್ನಳತ್ತೆಯನಿವಳೋ- ವದೆ ಕೊಂದಳ್‌ ಪಾಪಂ ಲೆ- ನದು ಪಾತಕಿ ಪುಟೆತೊಡಲ್ಲದೇಂ ಸತ್ತಪಳೇ
--------------
ಜನ್ನ
ಮೀನಾದುದೆಯ್ಯಮೃಗಮು- ಜ್ಹೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್‌ ತಾನಲ್ಲಿ ಮೊಸಳೆಯಾದ ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ
--------------
ಜನ್ನ
ಮೇಗಂಂ ಬಗೆವೊಡೆ ವಧೆ ಹಿತ ಮಾಗದು ಮರ್ತ್ಯಂಗೆ ನಿತ್ಯಮೇ ಮಾನಸವಾಟ್‌ ಈಗಳೊ ಮೇಣ್‌ ಆಗಳೂ ಮೇಣ್‌ ಸಾಗುದುರೆಗೆ ಪುಲ್ಲನಡಕಿ ಕೆಡುವನೆ ಚದುರಂ
--------------
ಜನ್ನ
ವನಿತೆಯ ಕೇಡಂ ಜನಪತಿ ಕನಸಿನ ನೆವದಿಂದೆ ಮಸೆ ತಲ್ಲಣದಿಂ ತಾಯ್‌ ನೆನೆದಳ್‌ ಪೊಲ್ಲಮೆಯಂ ವಂ ಚನೆಯೆಲ್ಲಿಯುಮೊಳು ಮಾಡಲಾಅದು ಕಡೆಯೊಳ್‌
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
ಶ್ರೀಗಿರಿದುರ್ಗಮಲ್ಲನೃಪರಾಜ್ಯದ ವತ್ಸರಮುತ್ತರೋತ್ತರ- ಕ್ಯಾಗಿರೆ ಶುಕ್ಲದಾಶ್ವಯುಜಕೃಷ್ಣದ ಪಂಚಮಿ ಪುಷ್ಕತಾರೆ ಪೂ- ರ್ಣಾ ಗುರುವಾಗೆ ಭೂಸತಳದೊಳೇ ಕೃತಿ ಪೆತ್ತುದು ಸುಪ್ರತಿಷ್ಠಯಂ ಚಾಗದ ಭೋಗದಗ್ಗಳಿಕೆಯಂ ಮೆಲೌದಂ ಕವಿಭಾಳಲೋಚನಂ
--------------
ಜನ್ನ
ಸೊಡರಿಂ ಮುಡುಪಿಂದಂ ಪಿಂ- ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂ ನೆಣಮುರ್ಚೆ ಬೆಂಕಿಯಿಂ ಕೆಳ ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ
--------------
ಜನ್ನ
-->