ಒಟ್ಟು 113 ಕಡೆಗಳಲ್ಲಿ , 1 ಕವಿಗಳು , 91 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪೊಡೆಯೆ ಕೃಕವಾಕು ನಿನದಂ ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಟೆರೆ ಪೊಯ್‌ ವಡೆದಂತೆ ಪಂದೆಯಂ ಪಾ- ವಡರ್ದಂತಾಗಿರೆ ಯಶೋಧರಂ ಬೆರಗಾದಂ
--------------
ಜನ್ನ
ಪೋಂತಾದೆನಿಲ್ಲಿ ಸಗ್ಗದೊ- ಳೆಂತುಂಡಪೆನುಂಡ ಪಾರ್ವರೊಲಿದುದು ಗೆಡೆವರ್‌ ಪೋಂತಂ ಕೊಂದು ದಿವಕ್ಕದು- ಮುಂತಾಗಿಯೆ ಸಲ್ವುದೆಂಬರಿದನ್ನೇನೆನ್ನರ್‌
--------------
ಜನ್ನ
ಪ್ರಜೆಯೆಲ್ಲಂ ಜಲಗಂಧ ವ ಸ್ರಜ ತಂಡುಲ ಧೂಪ ದೀಪ ಚರು ತಾಂಬೂಲ ವ್ರಜದಿಂ ಪೂಜಿಸುವುದು ಜೀ- ವಜಾತದಿಂದೆನಗೆ ಬಲಿಯನಿತ್ತೊಡೆ ಮುನಿವೆಂ
--------------
ಜನ್ನ
ಬದಗುಳಿಗನ ತೋಳ್ಕುಟ್ಟಿದ ಸುದತಿಯೊಳಿಂಬಾಗದಂತೆ ಕೆಟ್ಟುದು ಪಿ ಮು ಟ್ಟಿದ ದುಗ್ಧದಂತೆ ನೀರ್ಮು ಟ್ಟಿದ ಜೇನೆಯ್ಯಂತೆ ಪತಿಗೆ ಶಯ್ಯಾತಳದೊಳ್‌ ರ್ಜ
--------------
ಜನ್ನ
ಬಸಿದಪುದು ಮೆಯ್ಯ ರಸಿಗೆಯುಮೊಡಲಟೆದುದಾದೊಡಂ ಮಾಣಳೆ ನಾಯ್‌ ಬಸನಿಗತನಮಂ ಮಾಣ್ಬೀ ಕಿಸುಗುಳಿಯಂ ಜವನುಮುಯ್ಯಲೇಂ ಪೇಸಿದನೋ
--------------
ಜನ್ನ
ಬಾಳಲರ್ಗುಡಿ ಪಿಕರುತಿ ಬಾ- ಯ್ಯೇಳಿಕೆ ಮಾಂದಳಿರ ಕೆಂಪು ದೀವಿಗೆಯೆನೆ ಭೂ ಪಾಳಂ ಬರೆ ಶೋಧಿಪ ವನ- ಪಾಳನವೊಲ್‌ ಮುಂದೆ ಬಂದುದಂದು ವಸಂಂತಂ
--------------
ಜನ್ನ
ಬಿನದಕ್ಕೆ ಪಾಡುತ್ತಿರೆ ನು ಣ್ಣನಿ ನಿದ್ರೆಗೆ ಕತಕಬೀಜಮಾಯ್ತೆನೆ ಮೃಗಲೋ ಚನೆ ತಿಳಿದಾಲಿಸಿ ಮುಟ್ಟಿದ ಮದಮನೆ ತೊಟ್ಟನೆ ಪಸಾಯದಾನಂಗೊಟ್ಟಳ್‌
--------------
ಜನ್ನ
ಬೆನ್ನೊಳೆ ಪೋದಂ ದೋಷದ ಬೆನ್ನೊಳೆ ಸಂದಿಸುವ ದಂಡದಂತರಸಂ ಪ್ರ ಚ್ಛನ್ನದಿನುರ್ಚಿದ ಬಾಳ್ವೆರ ಸನ್ನೆಗಮಾ ಬದಗನರಸಿ ತಡೆದೊಡೆ ಮುಳಿದಂ
--------------
ಜನ್ನ
ಬೇಂಟೆಗೆ ನಡೆಯೆ ಯಶೋಮತಿ ಗೆಂಟಖೊಳಾರಣ್ಯವಾಸಿಗಳ್‌ ನಿಲೆ ಕಂಡಾ- ಬೇಂಟೆ ಪರಿಯದೊಡೆ ಬಿನದದ ಕಂಟಕನೀ ಸವಣನೆನುತೆ ಬರುತಂಂ ಮುನಿದಂ
--------------
ಜನ್ನ
ಬೇಡಿದ ಕಾಡೊಳ್‌ ಮಲೆವೆಯಾ ಯ್ತೀಡಾಡುವಮಿದಆ ಪೊೌಯನೆನಗಂ ನಿನಗಂ ಮೂಡುವ ಮುಖುಗುವ ದಂದುಗ- ಮಾಡಿದ ಹೊಲನುಂಡ ಮರ್ದು ಕಂಡ ವಿಚಾರಂ
--------------
ಜನ್ನ
ಮಂದಸ್ಮಿತ ವರ ಕೌಮುದಿ ನಿಂಂದುದು ಮೃಗನಾಭಿ ತಿಲಕಲಕ್ಷ್ಮದ ಪೊಳಪಿ ಲ್ಲಿಂದೇಕೆ ಕಂದ ಪಗಲೊಗೆ ದಿಂದುವಿನಂತಾಯ್ತು ನಿನ್ನ ಮಂಗಲ ವದನಂ
--------------
ಜನ್ನ
ಮಣಿದೊಣಇಗಿದನಂತೆವೊಲಿರೆ ಪಣಮೆ ಪಗಲ್‌ ಮುಗಿಯೆ ಸಿಲ್ಕಿ ಕೈರವದನಿರುಳ್‌ ಪೊಜಮಡುವಂತರಸನ ತೋ ಳ್ಗೆೆಯಿಂ ನುಸುಳ್ಬರಸಿ ಜಾರನಲ್ಲಿಗೆ ಪೋದಳ್‌
--------------
ಜನ್ನ
ಮನದನ್ನಳಪ್ಪ ಕೆಳದಿಗೆ ಮನಮಂ ಮುಂದಿಟ್ಟು ಬಟುಕ ಕಲುಪಿದೊಡವಳಾ ತನ ರೂಪುಗಂಡು ಕಣ್ಣಂ ಮನಕ್ಕ ಮುದ್ಗಾರವೆತ್ತು ಭೋಂಂಕನೆ ಮಗುಳ್ಳಳ್‌
--------------
ಜನ್ನ
ಮಳಯಜದ ಮೊಲೆಯ ಕುಂಕುಮ- ದಳಕದ ಕತ್ತುರಿಯ ಬಣ್ಣವಣ್ಣಿಗೆ ಕೊಳದೊಳ್‌ ತಳರ್ದಿರೆ ಜಲರುಹಮುಖಿಯರ್‌ ಜಳಕೇಳಿಯ ನೆವದಿ ದೂಳಿಚಿತ್ರಂ ಬರೆದರ್‌
--------------
ಜನ್ನ
ಮೀನಾದುದೆಯ್ಯಮೃಗಮು- ಜ್ಹೇನಿಯ ದೇಶದೊಳುಮೆಸೆವ ಸಿಂಪಾನದಿಯೊಳ್‌ ತಾನಲ್ಲಿ ಮೊಸಳೆಯಾದ ತ್ತಾ ನಾಗುನುಮಾಗಿ ಬೆಳೆಯೆ ಮತ್ತೊಂದು ದಿನಂ
--------------
ಜನ್ನ
-->