ಒಟ್ಟು 183 ಕಡೆಗಳಲ್ಲಿ , 1 ಕವಿಗಳು , 125 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರಮೇಜ್ಸ್‌ಯುಳ್ಳ ಪಿಳ್ಳೆಗ- ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ- ದರನಿತ್ತು ಚಂಡಕರ್ಮಂ- ಗರಸನವಂ ನೋಡಿ ಸಲಹು ನೀನೆಂದಿತ್ತಂ
--------------
ಜನ್ನ
ಕಾರಿರುಳೊಳಮೆಳವಿಸಿಲಂ ಪೂರಂ ಪರಿಯಿಪುವು ಬೀದಿಯೊಳ್‌ ನಿಜರುಚಿಯಿಂ ಹೀರೆಯ ಹೂವಿನ ಬಣ್ಣದ ನೇರಾಣಿಯ ಕುಸುರಿವೆಸದ ನೆಲೆಮಾಡಂಗಳ್‌
--------------
ಜನ್ನ
ಕಾಲದ ಗರ ಟಗೆಯೊಳ್‌ ನೃಪಚಿತ್ತಚೋರನಂ ತೋಜಹುವ ದೀ ವಿಗೆಯೆನೆ ಸಂಮುಖಮಾಯ್ತೋ ಲಗದೊಳ್‌ ನಿರ್ದಿಷ್ಟ ಪಳಿತಚಿಕುರಂ ಮುಕುರಂ
--------------
ಜನ್ನ
ಕಿತ್ತ ಕರವಾಳ್ಗ ಮೆನಗಂ ಮೃತ್ಯುವಿನಂತಿರ್ದ ಮಾರಿಗಂ ಬೆದಅದೆ ನಿಂಂ- ದರ್ಶಿಯನೆ ನುಡಿದರಿವರ ನೆ ಗುಟ್‌ ಕರಂ ಪಿರಿದು ಧೀರರಕಟ ಕುಮಾರರ್‌
--------------
ಜನ್ನ
ಕುದಿರೊಳರ್ದೂಗಿದಿದ ಶಂ ಖದ ದನಿ ನಿಶ್ಚಿದ್ರಮಾದೊಡಂ ಪೊಣ್ಮದೆ ಶಂ ಖದಿನನ್ಯಮಲ್ಲದೇಂ ಪೊ- ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ
--------------
ಜನ್ನ
ಕೆಮ್ಮನೆ ಬಾಳಂ ಕಿಟ್ತಯ್‌ ಕಿಂ ಮಿತ್ರಂ ಯನ್ನಿವರ್ತಯತಿ ಪಾಪಾತ್ತೆಂ- ದಾನ್‌ ಮಾಣಿಸದೊಡೆ ಕೋಟಲೆ- ಯಂ ಮಾಡವೆ ದೇವ ನಿನಗೆ ದುರಿತಶತಂಗಳ್‌
--------------
ಜನ್ನ
ಕೆಲಕಾಲಮುಗ್ರತಪಮಂ ಸಲಿಸಿ ಸಮಾಧಿಯೊಳೆ ಮುಡಿಪಿ ಮೂಣನೆಯ ದಿವಂ ನೆಲೆಯಾಗೆ ಮಾರಿದತ್ತಂ ಕಲಿಯಂ ಮೂದಲಿಸಿದಂತೆ ದೇವನೆ ಆದಂ
--------------
ಜನ್ನ
ಕೇವಲ ವಿಬೋಧನೇತ್ರನೆ ದೇವನೆ ಪರಮಾತ್ಮನಾಗಮಂ ತದ್ವಚನಂ ಜೀವದಯೆ ಧರ್ಮಮೆಂಬೀ ಭಾವನೆಯಂ ನೇಖೆಯೆ ನಂಬುವುದು ಸಮ್ಯಕ್ತ್ವಂ
--------------
ಜನ್ನ
ಕೊಳದೊಳಗೋಲಾಡಿ ತಳಿ- ರ್ತೆಳಮಾವಿನೊಳುಯ್ಯಲಾಡಿ ನರಪತಿ ಕುಸುಮಾ- ವಳಿಯೊಳ್‌ ರತಿರಾಗದಿನೋ- ಕುಳಿಯಾಡಿ ವಿಲಾಸಗೋಷ್ಠಿಯೊಳ್‌ ಕುಳ್ಳಿರ್ದಂ
--------------
ಜನ್ನ
ಕೋಟಲುಯ ಕೂಗೆತ್ತಲ್‌ ನೀನ್‌ ಸೂಟಣೆದವನೆಸೆವುದೆತ್ತಲಾ ಖಗಯುಗಳಂಂ ಬೀಟಲೊಡನಾದ ಮಾನಸ- ವಾಖೆತ್ತಲ್‌ ನೋಡ ಧರ್ಮಮೊದವಿದ ಪದನಂ
--------------
ಜನ್ನ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ- ಹಿಯುಮಾದರ್‌ ಪಗೆ ಸುತ್ತೆ ಮೀನ್‌ ಮೊಸಳೆಯಾದರ್‌ ಪೋಂತುಮಾಡಾದರ- ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್‌ ತಪ- ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್‌
--------------
ಜನ್ನ
ಕ್ಷಿತಿಯೋಳ್‌ ಸಂಸ್ಕೃತದಿಂ ಪ್ರಾ- ಕೃತದಿಂ ಕನ್ನಡದಿನಾದ್ಯರಾರ್‌ ಈ ಕೃತಿಯಂ ಕೃತಿಮಾಡಿದರವರ್ಗಳ ಸನ್‌ ಮತಿ ಕೈಗುಡುಗೆಮಗೆ ಸರಸಪದಪದ್ಧತಿಯೊಳ್‌
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ಜನಕಂ ಯಶೋಧರಂ ಪಿ- ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ- ಡಿನ ಪೋರಿ ಪೋಂತು ಕುಕ್ಕುಟ- ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
--------------
ಜನ್ನ
ಜೀವದಯೆ ಎಂಬುದೆಮ್ಮಯ ಮಾವನ ಪೆಸರಿರ್ದ ನಾಡೊಳಿರದಾತಂಗಂ ದೇವಗತಿಯಾಯ್ತು ಸೋದರ- ರ್ಗಾ ವೈಭವಮಾಯ್ತು ಧರ್ಮದಿಂದಾಗದುದೇಂ
--------------
ಜನ್ನ
-->