ಒಟ್ಟು 60 ಕಡೆಗಳಲ್ಲಿ , 1 ಕವಿಗಳು , 53 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರೆವುದು ದುರಿತತಮಿಸ್ರಂ ಪೊರೆಯೇಜುದಮಳದೃಷ್ಟಿಕುವಳಯ ವನಮಾ- ಚರಿಪ ಜನಿಕ್ಕೆ ಯಶೋಧರ ಚರಿತ ಕಥಾಶ್ರವಣಮೆಂಂಬ ಚಂದ್ರೋದಯದೊಳ್‌
--------------
ಜನ್ನ
ಪೊಡೆಯೆ ಕೃಕವಾಕು ನಿನದಂ ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಟೆರೆ ಪೊಯ್‌ ವಡೆದಂತೆ ಪಂದೆಯಂ ಪಾ- ವಡರ್ದಂತಾಗಿರೆ ಯಶೋಧರಂ ಬೆರಗಾದಂ
--------------
ಜನ್ನ
ಭಲರೆ ನೃಪೇಂಂದ್ರಾ ದಯೆಯೊಳ್‌ ನೆಲೆಗೊಳಿಸಿದೆ ಮನಮನಮಮ ನೀನ್‌ ಕೇಳ್ದುದು ಸ ತ್ಫಲಮಾಯ್ತು ಧರ್ಮಪಥದೊಳ್‌ ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
--------------
ಜನ್ನ
ಮತ್ತಂ ಧರ್ಮವಿಹಾರ ನಿ- ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳ್ಬು ಸು- ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
--------------
ಜನ್ನ
ಮಾಡಿದ ಕೋಚೆಯನಜೆದ- ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್‌ ಗೂಡಿನ ಕೋಣಚೆಗಳಾದರ್‌ ನೋಡಯ್‌ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್‌
--------------
ಜನ್ನ
ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
ಶೀರ್ಷಾಭರಣಮೆಂಂಬ ಧರೆಗು- ತ್ಯರ್ಷಾ ವಿಳಾಸನದ ಭೂಮಿ ಸಕಳ ಜನಕ್ಕಂ ಹರ್ಷಮನೀವುದು ಭಾರತ ವರ್ಷದಯೋಧ್ಯಾ ಸುವಿಷಯದೊಳ್‌ ರಾಜಪುರಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
-->