ಒಟ್ಟು 101 ಕಡೆಗಳಲ್ಲಿ , 1 ಕವಿಗಳು , 79 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಲೆಯಿಂ ಕುಕ್ಕೂಕೂ ಎಂ ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ ಲ್ಲುಲಿಯೆನೆ ಪಿಟ್ಟಿನ ಕೋಟೆಯ ತಲೆಯಂ ಹಿಡಿವಂತಿರಟ್ಟೆ ಪಾಣಿದುದಿನಿಸಂ
--------------
ಜನ್ನ
ತಳಿರ್ಗಳ ಚಾಳೆಯಮೆಳಲತೆ- ಗಳ ಲುಳಿ ಶಿಳಿಗೊಲದ ತೆರೆಯ ತಾಳಂ ಪೊಸವೂ- ಗಳ ನೋಟಮಾಗೆ ನೃಪನಂ ಮಳಯಾನಿಲನೆಂಬ ನುಟ್ಟವಂ ಕೇಳಿಸಿದಂ
--------------
ಜನ್ನ
ತಾನಂದುವರೆಗಮೊದವಿಸಿ ದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ- ತ್ರೀನಾಥಪದವಿಯಂ ಕೊ- ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
--------------
ಜನ್ನ
ದೊರೆಕೊಳೆ ಸಮಾಧಿಮರಣಂ ಚರಣಾಯುಧಯುಗಳಮಟೆದು ಕುಸುಮಾವಳಿಯೆಂ ಬರಸಿಯ ಬಸಿಖೊಳ್‌ ಬಂದವು ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್‌
--------------
ಜನ್ನ
ದೊರೆವಡೆದ ಯಶೌಘನ ಭೂ ವರತಿಳಕನ ಕಣ್ಗಳಂಗರಕ್ಕರ್‌ ಮನಮಾ ಭರಣಂ ರಾಜ್ಯಶ್ರೀ ಸಹ ಚರಿಯನೆ ಸಂದತ್ತು ಚಂದ್ರಮತಿಗರಸಿತನಂ
--------------
ಜನ್ನ
ಧನಮಂ ಕಂಡ ದರಿದ್ರನ ಮನದವೊಲೆಅಗಿದವು ಪರಿಜನಂಗಳ ನೊಸಲಾ ವಿನಯನಿಧಿಗಾ ಕುಮಾರಕ ನನುರಾಗದೆ ಮಾರಿದತ್ತ ವಿಭುಗಿಂತೆಂದಂ
--------------
ಜನ್ನ
ಧರಣೀ ಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ
--------------
ಜನ್ನ
ನಡೆ ಸೋಂಕಿದ ಕಡೆಗಣ್ಗಳ ಕುಡಿವೆಳಗಿಂಂ ಬಿಡುವ ಬೆಮರೊಳಂ ಪದದೊಳಮೇಂ ತಡವಾದರೊ ಕೌಮುದಿ ಕ ಣ್ಚಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್‌
--------------
ಜನ್ನ
ನಿನಗಂ ಕುಸುಮಾಳಿಗಂ ಜಯಿಸಿದಮಳೆಂಬುವಭಯರುಚಿಮತಿಗಳ್‌ ಮು- ನ್ನಿನ ಜನ್ಮಮನಿತುಮಂ ನೆ- ಟ್ಟನೆ ಬಲ್ಲರ್‌ ಕೇಳ್ದುನಂಬು ನೀನ್‌ ಧರಣಿಪತೀ
--------------
ಜನ್ನ
ನಿನಗೆ ಶುಭವೆಂದ ವಂದಿಯ ಮನೆಯಂಗಣದೊಳಗೆ ಪಣ್ತ್ಮು ಪರ್ವಿದ ಮಂದಾ ರ ನಮೇರು ಪಾರಿಜಾತದ ಬನದೊಳ್‌ ಸಿರಿ ಮೆಣೌವುದಲ್ತೆ ವನಕೇಳಿಗಳಂ
--------------
ಜನ್ನ
ನಿರವಿಸಿದ ಚಂದ್ರಮತಿಯೆಂ- ಬರಸಿಯೆ ನಾಯುರಗಿ ಮೊಸಳೆ ಆಡು ಉಲಾಯಂ ಚರಣಾಯುಧವಧುವಾದಳ್ ಗುರುವಚನದಿನೀಗಳಭಯಮತಿಯಾಗಿರ್ದಳ್‌
--------------
ಜನ್ನ
ನುಣ್ಣುರುಳ ಪೊಳೆವ ಕಪ್ಪುಂ ಕಣ್ಣಗ್ಗಳಮಾದ ಮೆಯ್ಯ ಬೆಳಗೆಸೆವಿನಮಾ ಪೆಣಂಡು ರಾಜಲಕಿಯ ಕಣ್ಗಳ ದೊರೆಯಾಗಿ ಸುಮನೆ ಬಳೆವಿನಮಿತ್ತಲ್‌
--------------
ಜನ್ನ
ನೋಡುವ ಕಣ್ಣಳ ಸಿರಿ ಮಾ- ತಾಡುವ ಬಾಯ್ಗಳ ರಸಾಯನಂ ಸಂತಸದಿಂ ಕೊಡುವ ತೋಳ್ಗಳ ಪುಣ್ಯಂ ನಾಡಾಡಿಯ ರೂಪೆ ಕುವರ ವಿದ್ಯಾಧರನಾ
--------------
ಜನ್ನ
ಪಗಲನಿರುಳ್‌ ನಿಜರುಚಿಯಿಂ ಮಿಗಿಸುವ ಜಿನಭವನದರುಣಮಣಿ ಕಲಶಂಗಳ್‌ ನಗುವುವು ಕೇತುಗಳಿಂ ಕೇ ತುಗಳೊಳ್‌ ಕೆಳೆಗೊಂಡು ನಿಂದು ರವಿಮಂಡಲಮಂ
--------------
ಜನ್ನ
ಪರಿಹರಿಪೆಯೆಮ್ಮ ನುಡಿಯಂ ಗುರುವಚನಮಲಂಘನೀಯಮೆನ್ನದೆ ನೀನಾ ದರದಿಂ ಕೈಕೊಳ್‌ ಧರ್ಮದೊ ಳರಸುಗಳೇ ಶಾಂತಿಯೆಂದೊಡನುಸಿಸರಿಸರೆ ಪೇಟ್‌
--------------
ಜನ್ನ
-->