ಒಟ್ಟು 97 ಕಡೆಗಳಲ್ಲಿ , 1 ಕವಿಗಳು , 81 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಂಟಿಗೆತ್ತಲ್‌ ತದ್ದನ ಪರಿಸರದೊಳ್‌ ಬರುತಮಿರ್ದಕಂಪನರೆಂಬರ್‌ ತರುಮೂಲದೊಳಿರೆ ನಿಧಿಯಂ ಕುರುಡಂ ಕಾಣ್ಬಂತೆ ಚಂಡಕರ್ಮಂ ಕಂಡಂ
--------------
ಜನ್ನ
ಗಂಗಕುಲಚಕ್ರವರ್ತಿ ಕ- ಳಿಂಂಗಧರಾಧೀಶರಿವರಸಾರಂ ಸಂಸಾ- ರಂ ಗಡಮೆಂದರಣಿದಜೆದು ತ- ಪಂಗೆಯ್ದರ್‌ ನಾಮದಿಂ ಸುದತ್ತಾಚಾರ್ಯರ್‌
--------------
ಜನ್ನ
ಚದುರ ನಿಧಿ ಚಲದ ನೆಲೆ ಚಾ ಗದ ಸಾಗರಮಣ್ಮಿನಾಗರಂ ಪೆಂಪಿನ ಸಂ- ಪದಮಾಯದಾಯುವಾರೆಂ- ಬುದೊ ಜನ್ನಂ ಕಮ್ಮೆಕುಲದ ತೊಡವಿನ ರನ್ನಂ.
--------------
ಜನ್ನ
ಚಲದ ಬಲದೆಸಕದಿಂ ಸಲೆ ನಿಲೆ ನಾಲ್ಕುಂ ದೆಸೆಯ ಮೂಜುವರೆ ರಾಯರ ಮುಂಂ- ದಲೆಯೊಳಗುಂದಲೆಯೆನೆ ನಿಂ- ದಲೆವುದು ತೇಜಂ ಪ್ರತಾಪ ಚಕ್ರೇಶ್ವರನಾ
--------------
ಜನ್ನ
ಜನಕಂ ಯಶೋಧರಂ ಪಿ- ಟ್ಟಿನ ಕೋಟೆಯನಟೆದು ಕಟೆದು ನಿಲೆಯ್ಮಾನಾ- ಡಿನ ಪೋರಿ ಪೋಂತು ಕುಕ್ಕುಟ- ಮನೆ ಪುಟ್ಟಿದನೀಗಳಭಯರುಚಿಯಾಗಿರ್ದಂ
--------------
ಜನ್ನ
ತಡವಾದಪ್ಪುದು ಪೌರರ್‌ ಕುಡುವೇಟ್ಟುದು ಹಲವು ಜೀವರಾಶಿಯ ಬಲಿಯಂ ನಡೆಯೆನೆ ಹಸಾದಮಾಗಳೆ ಪಿಡಿತಾರದೆ ಮಾಣರೆನ್ನ ಕಿಂಕರರೆನುತುಂ
--------------
ಜನ್ನ
ತನುವಾರ್ಗಮಶುಚಿ ಶುದ್ಧಾ- ತ್ಮನೆ ಶುಚಿ ಕಾಗೆಯವೊಲೇನೊ ಮಿಂಂದವನೇಂ ಶು- ಸಂಸ್ಕಾರಶತೇನಾ- ಪಿನ ಗೂಥಃ ಕುಂಕುಮಾಯತೇ ಎಂದಜೆಯೆಯಾ
--------------
ಜನ್ನ
ತಲೆಯಿಂ ಕುಕ್ಕೂಕೂ ಎಂ ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ ಲ್ಲುಲಿಯೆನೆ ಪಿಟ್ಟಿನ ಕೋಟೆಯ ತಲೆಯಂ ಹಿಡಿವಂತಿರಟ್ಟೆ ಪಾಣಿದುದಿನಿಸಂ
--------------
ಜನ್ನ
ತಾನಂದುವರೆಗಮೊದವಿಸಿ ದೇನಂಗಳ್ಳಳ್ಳಿ ಕುಸುಮದತ್ತಂಗೆ ಧರಿ- ತ್ರೀನಾಥಪದವಿಯಂ ಕೊ- ಟ್ಟಾ ನರಪತಿ ಬಟೆಕ ದೀಕ್ಷೆಯಂ ಕೈಕೊಂಡಂ
--------------
ಜನ್ನ
ತೂಗಿಸಿ ತೊಲೆಯೊಳ್‌ ಬಾಯಂ ಮೂಗುಮನೊಡೆಯೊತ್ತಿ ಕೊಂದ ಕಳ್ಳನ ದೇಹಂ ತೂಗಿದೊಡೆ ಕುಂದದಾತ್ಮವಿ- ಭಾಗಂ ಬೇಹ್‌ಲ್ಲ ಜೀವನೆಂತುಂ ದೇಹಂ
--------------
ಜನ್ನ
ತೋರಮುಡಿವಿಡಿದು ಕುಡಿಯಂ ನಾರಂ ತದೆವಂತೆ ತದೆದು ಬೀಟೆಯ ಕಾಲಿಂ ಬಾರೇಟ* ಬದಗನೊದೆದೊಡೆ ಕೇರೆ ಪೊರಳ್ಜ್ಹಂತೆ ಕಾಲಮೇಲೆ ಪೊರಳ್ಬಳ್‌
--------------
ಜನ್ನ
ದೈವದಿನೆಂತಕ್ಕಿಂದಿನ ಸಾವೋಸರಿಸಿದುದು ಕರ್ಣಭೂಷಾವಳಿ ಭೂ ಷಾವಳಿಯಾಗದೆ ಸೆಳೆದೊಡೆ ಸಾವಲ್ಲಿಗೆ ಕಯ್ದುವಾಯ್ತು ನೆಯ್ದಿಲ ಕುಸುಮಂ
--------------
ಜನ್ನ
ದೊರೆಕೊಳೆ ಸಮಾಧಿಮರಣಂ ಚರಣಾಯುಧಯುಗಳಮಟೆದು ಕುಸುಮಾವಳಿಯೆಂ ಬರಸಿಯ ಬಸಿಖೊಳ್‌ ಬಂದವು ನರಯುಗಳಕಮಾಗಿ ನಚ್ಚನಚ್ಚೊತ್ತಿದವೊಲ್‌
--------------
ಜನ್ನ
ಧನಮಂ ಕಂಡ ದರಿದ್ರನ ಮನದವೊಲೆಅಗಿದವು ಪರಿಜನಂಗಳ ನೊಸಲಾ ವಿನಯನಿಧಿಗಾ ಕುಮಾರಕ ನನುರಾಗದೆ ಮಾರಿದತ್ತ ವಿಭುಗಿಂತೆಂದಂ
--------------
ಜನ್ನ
ನಡೆ ಸೋಂಕಿದ ಕಡೆಗಣ್ಗಳ ಕುಡಿವೆಳಗಿಂಂ ಬಿಡುವ ಬೆಮರೊಳಂ ಪದದೊಳಮೇಂ ತಡವಾದರೊ ಕೌಮುದಿ ಕ ಣ್ಚಿಡೆ ಕರಗುವ ಚಂದ್ರಕಾಂತ ಮಣಿಪುತ್ರಿಕೆವೊಲ್‌
--------------
ಜನ್ನ
-->