ಒಟ್ಟು 64 ಕಡೆಗಳಲ್ಲಿ , 1 ಕವಿಗಳು , 56 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಲರೆ ನೃಪೇಂಂದ್ರಾ ದಯೆಯೊಳ್‌ ನೆಲೆಗೊಳಿಸಿದೆ ಮನಮನಮಮ ನೀನ್‌ ಕೇಳ್ದುದು ಸ ತ್ಫಲಮಾಯ್ತು ಧರ್ಮಪಥದೊಳ್‌ ಸಲೆ ಸಂದಪೆ ಕಾಲಲಬ್ಬಿ ಪೊಲಗಡಿಸುವುದೇ
--------------
ಜನ್ನ
ಭೈರವನ ಜವನ ಮಾರಿಯ ಮೂರಿಯವೋಲ್‌ ನಿಂದ ಮಾರಿದತ್ತಂ ಲಲಿತಾ- ಕಾರರ ಧೀರರ ಬಂದ ಕು ಮಾರರ ರೂಪಿಂಗೆ ಠಕ್ಕುಗೊಂಂಡಂತಿರ್ದಂ
--------------
ಜನ್ನ
ಮಾಡಿದ ಕೋಚೆಯನಜೆದ- ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್‌ ಗೂಡಿನ ಕೋಣಚೆಗಳಾದರ್‌ ನೋಡಯ್‌ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್‌
--------------
ಜನ್ನ
ಮಾರಿ ಮಾಲಯಾನಿಳಂ ನವ ನೀರಜವನಮೆಂಬ ಕೆಂಡದೊಳ್‌ ದಂಡನಮ- ಸ್ಕಾರದೆ ಬಂಂದಪನಿತ್ತವ- ಧಾರಿಪುದೆಂಬಂತಿರುಲಿದುವರಗಿಳಿ ಬನದೊಳ್‌..
--------------
ಜನ್ನ
ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
ಮುದುಗರಡಿಯ ಮದುದೊವಲಂ ದದ ಕರಿಯಂ ತಾಳಕಾಯ ಮೋಳಿಗೆಯೊಂದಂಂ ದದ ಮರುಡನಷ್ಟವಂಕಂ ಮೊದಲೊಣಗಿದ ಕೂನಗೊರಡಿನಂದದ ಕೊಂಕಂ.
--------------
ಜನ್ನ
ಮೇರು ನೃಪ ಪ್ರಾಸಾದಂ ವಾರಧಿ ನಿಜಪರಿಖೆ ವಜ್ರವೇದಿಕೆ ತತ್‌ಪ್ರಾ- ಕಾರಂ ಜಂಬೂದ್ವೀಪಾ ಕಾರಮನಿಂಬಿಟ್ಟರೆಂಬಿನಂ ಪುರಮೆಸೆಗುಂ
--------------
ಜನ್ನ
ವರಮಂಂಚ ಮಣಿದ್ಯುತಿಧೃತ ಮರಾಳಿಕಾತೂಳತಳ್ಟದೊಳ್‌ ತಾಮೆಸೆದರ್‌ ಸುರಚಾಪಚ್ಛವಿ ಸುತ್ತಿದ ಶರದಭ್ರದೊಳೆಸೆವ ಖಚರದಂಪತಿಗಳವೊಲ್‌
--------------
ಜನ್ನ
ಶ್ರೀಮತ್ಕಾಣೂರ್ಗಣ ಚಿಂ. ತಾಮಣಿಗಳ್‌ ರಾಮಚಂದ್ರ ಗಂಡವಿಮುಕ್ತರ್‌ ತಾಮೆ ಗಡ ಗುರುಗಳೆನಿಪ ಮ- ಹಾ ಮಹಿಮೆಗೆ ನೋಂಂತ ಭವ್ಯಚೂಡಾರತ್ನಂ
--------------
ಜನ್ನ
ಸೊಡರಿಂ ಮುಡುಪಿಂದಂ ಪಿಂ- ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂ ನೆಣಮುರ್ಚೆ ಬೆಂಕಿಯಿಂ ಕೆಳ ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ
--------------
ಜನ್ನ
ಸ್ವರವೇದವಿದ್ಯೆಯಂ ತ- ನ್ನರಸಿಗೆ ಮೆಣೌಯಲ್ಕೆ ದೇವಿ ನೋಡೆನುತೆಚ್ಚಂ ಸರಲೆಯ್ದಿಸೆ ಕಡೆದುವವಂ- ತೆರಡರ್ಕಾಯುಃ ಪ್ರಮಾಣಮೊಂದಾದುದೆನಲ್‌
--------------
ಜನ್ನ
-->