ಒಟ್ಟು 87 ಕಡೆಗಳಲ್ಲಿ , 1 ಕವಿಗಳು , 71 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಗಣ್ಗಳ್‌ ಕೇದಗೆಯಂ ಪಡೆದುವು ಮಲ್ಲಿಗೆಗೆ ಸೆಳ್ಳುಗುರ್‌ ಸಂಂಪಗೆಯಂ ಪಡೆದುವು ಪಾದರಿಗೆನೆ ಸಂ- ಗಡರಿಂಂದಲರ್ಗೊಯ್ವ ವಾರವನಿತೆಯರೆಸೆದರ್‌
--------------
ಜನ್ನ
ಕನ್ನರನಾದರದಿಂ ಕುಡೆ ಹೊನ್ನಂ ಮನಮೊಸೆದು ತೈಲಪಂ ಕುಡೆ ರನ್ನಂ ಮನ್ನಿಸಿ ಬಲ್ಲಾಳಂ ಕುಡೆ ಜನ್ನಂ ಕವಿಚಕ್ರವರ್ತಿವೆಸರಂ ಪಡೆದರ್‌
--------------
ಜನ್ನ
ಕರಮೇಜ್ಸ್‌ಯುಳ್ಳ ಪಿಳ್ಳೆಗ- ಳೆರಡುಮನೋಲಗಿಸಿದಂ ನೃಪಂಗಲ್ಲಿಯ ಮಾ- ದರನಿತ್ತು ಚಂಡಕರ್ಮಂ- ಗರಸನವಂ ನೋಡಿ ಸಲಹು ನೀನೆಂದಿತ್ತಂ
--------------
ಜನ್ನ
ಕರಿದಾದೊಡೆ ಕತ್ತುರಿಯಂ ಮುರುಡಾದೊಡೆ ಮಲಯಜಂಂಗಳಂ ಕೊಂಕಿದೊಡೇಂ ಸ್ಮರಚಾಪಮನಿಳಿಕಯ್ದೆರೆ ಮರುಳೇ ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳ್‌
--------------
ಜನ್ನ
ಕಲ್ಲೊಳ್‌ ಪೊನ್‌ ಪಾಲೊಳ್‌ ಘೃತ- ಮಿಲ್ಲೆನವೇಡುಂಟು ದೇಹದೊಣಗಾತ್ಮನದೇ- ಕಿಲ್ಲ ಕುರುಡಂಂಗೆ ತೋಣದೊ- ಡಿಲ್ಲಪ್ಪದೆ ವಸ್ತು ಭೇದಿಪಂಗಾತ್ಮನೊಳಂ
--------------
ಜನ್ನ
ಕುದಿರೊಳರ್ದೂಗಿದಿದ ಶಂ ಖದ ದನಿ ನಿಶ್ಚಿದ್ರಮಾದೊಡಂ ಪೊಣ್ಮದೆ ಶಂ ಖದಿನನ್ಯಮಲ್ಲದೇಂ ಪೊ- ಣ್ಮಿದ ನಾದಂ ಕಾಯದಿಂದೆ ಜೀವನುಮನ್ಯಂ
--------------
ಜನ್ನ
ಕುದಿರೊಳ್‌ ಕಳ್ಳನನಿಕ್ಶಿಸಿ- ಸೊದೆಯಿಟ್ಟರೆ ಬಳಿದು ಬಟಿಿಕ ತೆಟೆದೊಳಗಂ ನೋ- ಡಿದೆನಾತ್ಮನಿಲ್ಲ ತನುವಿ- ರ್ಪುದು ಬೇಉೌಂಬಾತ್ಮನಂ ನೆಲಂ ನುಂಗಿದುದೋ
--------------
ಜನ್ನ
ಕೇಳಲೊಡಂ ಶಬ್ದಾರ್ಥಗು- ಣಾಳಂಕೃತಿ ರೀತಿಭಾವರಸವೃತ್ತಿಗಳಂ ಮೇಳವಿಸ [ಲ್‌] ಬಲ್ಲಂ ಬ- ಲ್ಹಾಳಂ ಸಾಹಿತ್ಯಕಮಳಮತ್ತಮರಾಳಂ
--------------
ಜನ್ನ
ಕೊಠತೆ ನಿನಗಿಲ್ಲದೇಕೆಂ ದಹಂಯೆಂ ನೀರೋಡಿ ನಿನ್ನ ತನುವಿನ ಬಣ್ಣಂ ಬಜುಗೋಳದವೊಲಾಯ್ತೀಕ್ಪಿಸಿ ಮಖುಗಿದುದನೀರ ಮೀನ್ಬೊಲಿಂದೆನ್ನ ಮನಂ
--------------
ಜನ್ನ
ಕ್ಷಯಮಂ ಹಿಟ್ಟಿನ ಕೋಟೆಗಿತ್ತು ನವಿಲುಂ ನಾಯಾದರೆಯ್ಯುಂ ವಷಾ- ಹಿಯುಮಾದರ್‌ ಪಗೆ ಸುತ್ತೆ ಮೀನ್‌ ಮೊಸಳೆಯಾದರ್‌ ಪೋಂತುಮಾಡಾದರ- ಲ್ಲಿಯೆ ಪೋಂತುಂ ಪುಲಿಗೋಣರಾದರೆರಡುಂ ಬಲ್ಗೋಟೆಯಾದರ್‌ ತಪ- ಸ್ವಿಯ ಮಾತಿಂಂದಮಳಾದರಟ್ತ್ತೆ ಮಗನುಂ ತಾಯುಂ ಯಶೌಫಪ್ರಿಯರ್‌
--------------
ಜನ್ನ
ಗಹಗಹಿಕೆವಡೆದ ವಹಿಣಿಯ ಸುಹಾಹೆ ರುಂಪೆಯದೊಳಮರೆ ಠಾಯದೊಳಂಂ ನಿ ರ್ವಹಿಸಿ ನೆಲೆಗೊಳಿಸಿ ಬಯ್ಲಿಕೆ ಮಹಚಾಳೆಯದಲ್ಲಿ ಮೂರ್ತಿವಡೆದುದು ರಾಗಂ
--------------
ಜನ್ನ
ಗುರುಬಿಟ್ಟ ರಾಜ್ಯಲಕ್ಷ್ಮಿಗೆ ವರನಾದೈ ಕಷ್ಟಮೆಲೆ ಯಶೋಧರ ನಿನ್ನೊಳ್‌ ನೆರೆದಿರ್ಪುದಲ್ಲದೆಂಬಂ ತಿರೆ ಪೋದಳ್‌ ಕೀರ್ತಿಕಾಂತೆ ದೆಸೆಯೆಂತುವರಂ
--------------
ಜನ್ನ
ಗುರುವಿಂದು ಬೆಸಸೆ ಭಿಕ್ಷೆಗೆ ಬರುತಿರೆ ಪಿಡಿತಂದರೆಮ್ಮನಾ ದೆಸೆಗೆ ಭಯಂ ಪುರುಳಿಲ್ಲ ನಿನ್ನಕೇಡಂ ಪರಿವೀಕ್ಷಿಸಿ ಕರುಣದಿಂದೆ ತಲ್ಲಣಿಸಿದಪೆಂ
--------------
ಜನ್ನ
ತಡವಾದುದುಂಟು ನಲ್ಲನೆ ಬಡಿ ಮುಳಿಯದಿರರಸನೆಂಬ ಪಾತಕನೆನ್ನಂ ತೊಡೆಯೇಉ ಸಿ ಕೇಳಿಕೆಯಾ ದೊಡೆ ನೋಡುತ್ತಿರ್ದೆನುಂತೆ ನಲಲಣ್ಮುವೆನೇ
--------------
ಜನ್ನ
ತಲೆಯಿಂ ಕುಕ್ಕೂಕೂ ಎಂ ಬುಲಿ ನೆಗೆದುದು ಕೂಗಿ ಕರೆವ ದುರಿತಂಗಳ ಬ ಲ್ಲುಲಿಯೆನೆ ಪಿಟ್ಟಿನ ಕೋಟೆಯ ತಲೆಯಂ ಹಿಡಿವಂತಿರಟ್ಟೆ ಪಾಣಿದುದಿನಿಸಂ
--------------
ಜನ್ನ
-->