ಒಟ್ಟು 36 ಕಡೆಗಳಲ್ಲಿ , 1 ಕವಿಗಳು , 33 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಣೀ ಪಾರ್ವತಿ ಮಾಡಿದ ಜಾಣೆಂತುಟೊ ಭಾಳಲೋಚನಂ ಕವಿಸುಮನೋ- ಬಾಣನ ಮಗನೆಂದಖಿಳ ಕ್ಷೋಣಿಗೆ ಪೆಸರಾಯ್ತು ಕೂರ್ಮೆಗಿದು ಕೌತುಕಮೇ
--------------
ಜನ್ನ
ಸುರತ ಸುಖಪಾರವಶ್ಶಂ ತರೆ ನಿದ್ರಾಭರಮನಿರ್ವರುಂ ಶಿಥಿಲತನೂ ಪರಿರಂಭಣದಚ್ಚಳಿಯದೆ ಪರಿವೇಷ್ಟಿತ ಬಾಹುವಳಯದೊಳ್‌ ಕಣ್ಗಯ್ದರ್‌
--------------
ಜನ್ನ
ಸೊಡರಿಂ ಮುಡುಪಿಂದಂ ಪಿಂ- ತಣ ಮುಂತಣ ಕಾಲ್ಗಳಲ್ಲಿ ಬೆಟ್ಟಿಸಿ ದಸಸಿಯಂ ನೆಣಮುರ್ಚೆ ಬೆಂಕಿಯಿಂ ಕೆಳ ಗಣ ಮೆಯ್ಯಿಂದುರುಪಿ ಬರಿಯ ಬಾಡಂ ತೆಗೆದಂ
--------------
ಜನ್ನ
-->