ಒಟ್ಟು 194 ಕಡೆಗಳಲ್ಲಿ , 1 ಕವಿಗಳು , 147 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ರೌದ್ರಹತಿಗೆ ತವೆ ಸಂ ಸಾರಂ ತತ್ಪುರದ ಪೊಟಗೆ ಪುಟ್ಟಿದುವಂತಾ ಸೈರಿಭಮುಂ ಪೋಂತುಂ ಪೊಲ- ಗೇರಿಯ ಮಾದಿಗರ ಮನೆಯ ಕೋಟೆಯ ಬಸಿಉಳ್‌
--------------
ಜನ್ನ
ಆ ವಿಂಧ್ಯನಗರದೊಳಾ ನಾಯ್‌ ಪಾವಾಯ್ತಾ ನವಿಲುಮೆಯ್ಯಮೃಗಮಾಯ್ತಾ ಎಯ್‌ ಪಾವಂ ಪಗೆಮಿಗೆ ತಿಂದುದು ಬಲ್‌ ಮೇವಂತಿರೆ ಪುಲ್ಲಸರವಿಯಂ ಪುಲಿ ಗೋಣಂ
--------------
ಜನ್ನ
ಆ ವಿಕಟಾಂಂಗನೊಳಂತಾ ದೇವಿಗೆ ರುಚಿಯಾಗೆ ರತಿಫಲಾಸ್ವಾದನದೊಳ್‌ ಬೇವಂ ಮೆಚ್ಚಿದ ಕಾಗೆಗೆ ಮಾವಿಳಿದಪ್ಪಂತೆ ಪತಿಯೊಳಿಳಿದಾಯ್ತು ಮನಂ
--------------
ಜನ್ನ
ಆದೊಡೆ ಸಿಟ್ಟಿನ ಕೋಟೆಯ ನಾದೊಡಮಿಂದೊಂಂದನಿಕ್ಕವೇಟ್ಟುದು ಮಿಕ್ಕಂ ದಾದೇವಿಗೆನ್ನನಿಕ್ಕಿಯು ಮೀ ದುರಿತಮನಿಂದು ಮಗನೆ ಪರಿಹರಿಸದಿರೆಂ
--------------
ಜನ್ನ
ಆಯೆಡೆಗೆ ಜಾಯಿಲಮರಸನ ಪಸಾಯಿತಂ ಕೋಡೆರಡುಂ ಕೋಯೆ ಸೆಳೆದಶ್ವಮಹಿಷ ನ್ಯಾಯಂ ನಿಲೆ ಕೊಂದುದಂತದಂ ಕೇಳ್ಬರಸಂ
--------------
ಜನ್ನ
ಇತಿಹಾಸಮೆಂಬ ವಿಮಳಾ- ಮೃತವಾರ್ಧಿಯೊಳೊಗೆದ ಕಲ್ಪಕುಜದಂತೆ ರಸಾ- ನ್ವಿತಮಾಗಿರೆ ಕಥೇ ಬುಧಸಂ- ತತಿಗಕ್ಷಯ ಸುಖಮನೀವುದೊಂಂದಚ್ಚರಿಯೇ
--------------
ಜನ್ನ
ಇರ್ದಳೊ ಮೇಣ್‌ ಬರ್ದಳೊ ಮೇಣ್‌ ಅರ್ದಳೊೂ ಮೇಣ್‌ ಅಷ್ಟವಂಕನೊಳ್‌ ಕಪ್ಟೆಯದೆಂಂ- ತಿರ್ದಳೂ ಕಾಣೆನದೇಕೆನು- ತಿರ್ದುದು ಕೋಟಲೆಗೆ ಕೋಡು ಮೂಡಿದ ತೆಅದಿಂ
--------------
ಜನ್ನ
ಇವು ಧರ್ಮಮೆಂದು ಬಗೆವೊಡ ಮವಿವೇಕದೆ ಶಾಂತಿಮಾಡೆ ಬೇತಾಳಂಂ ಮೂ Ms SW ಹಿಂಸೆಯಿಂ ಮೂ ಡುವ ಮುಂತಣ ಕೇಡನೆಂತು ಕಟೆವೆಂಂ ಬಟೆಯಂ
--------------
ಜನ್ನ
ಇಸೆ ಪಸುಮಜೆ ಯೋನಿಮುಖ ಪ್ರಸವಕ್ಕಲಸಿದವೊಲೇಖ ಬಾಯಿಂ ತಾಯೊಂ- ದಸುವೆರಸು ಬಿರ್ದುದಂ ರ ಕ್ಷಿಸಲಿತ್ತಂ ಮಾದರಂಗೆ ಕರುಣದಿನರಸಂ
--------------
ಜನ್ನ
ಈ ನಗರಿಯಪ್ಪುದೆಮ್ಮು- ಜ್ಹೇನಿ ಇದಾನಿರ್ಪ ನೆಲೆಯ ದವಳಾರಮಿದುಂ ತಾನಮೃತಮತಿಯ ಮಾಡಂ ಮಾನಿನಿ ನಂಜಿಟ್ಟಳೆನಗೆ ಮುಡಿಪಿದೆನಿದಖೊಳ್‌
--------------
ಜನ್ನ
ಈವಿಖವ ಕಾವ ಗುಣದಿಂ- ದಾವಿಷ್ಣುವಿನೊರೆಗೆ ದೊರೆಗೆವರಲುಖು ದ ಧರಿ- ತ್ರೀವಲ್ಲಭರೇನೇಚಲ ದೇವಿಗಮೇಃಚೆಯಂಗ ನೃಪತಿಗಂ ಪುಟ್ಟಿದರೇ
--------------
ಜನ್ನ
ಎಂತು ಬೆಸಗೊಂಡೆ ಬೆಸಗೊಂಂ ಡಂತಿರೆ ದತ್ತಾವಧಾನನಾಗು ಜಯಶ್ರೀ ಕಾಂತೆಯುಮಂ ಪರಮಶ್ರೀ ಕಾಂತೆಯುಮಂ ನಿನಗೆ ಕಡುಗಮೀ ಸತ್ಯಥನಂ
--------------
ಜನ್ನ
ಎಂದಾಕೆಗೆ ಲಂಚಮನಿ ತ್ರೆಂದುದನೆಂದೆರವಿಗೊಂಡು ಕಟುಪುವುದುಮವಳ್‌ ಸಂದಿಸಿದೊಡಮೃತಮತಿ ರಾ ತ್ರಿಂ ದಿವಮಾತನೊಳೆ ಸಲಿಸಿದಳ್‌ ತೆಜಪುಗಳಂ
--------------
ಜನ್ನ
ಎಂದು ನೆನೆದಿಜಯಲೊಲ್ಲದೆ ಬಂದರಸಂಂ ಮುನ್ನಿನಂತೆ ಪವಡಿರೆ ತಾನುಂ ಬಂದು ಮ*ದರಸನೊಣಗಿದ ನೆಂದೊಯ್ಯನೆ ಸಾರ್ದು ಪೆಣಗೆ ಪಟ್ಟಿರ್ಪಾಗಳ್‌
--------------
ಜನ್ನ
ಎಂದು ಬೆಸಗೊಂಡ ತಾಯ್ಗೆ ಮ ನಂದೋಟಅದೆ ನೆವದಿನರಸನಿಂತುಸಿರ್ದಂ ಸುಯ್‌ ಕಂದಿಸಿದಧರಕ್ಕೆ ಸುಧಾ ಬಿಂದುಗಳಂ ತಳೆಯೆ ದಂತಕಾಂತಿ ಪ್ರಸರಂ
--------------
ಜನ್ನ
-->