ಒಟ್ಟು 30 ಕಡೆಗಳಲ್ಲಿ , 1 ಕವಿಗಳು , 27 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರಣೀ ಭಾರಕ್ಕೆ ಯಶೋ ಧರನನೊಡಂಬಡಿಸಿ ನೂರ್ವರರಸುಗಳೊಡನಾ ದರದಿಂ ಕಂಬಂದಪ್ಪಿದ ಕರಿಯಂತೆ ತಪೋವನಕ್ಕೆ ನಡೆದನಿಳೇಶಂ
--------------
ಜನ್ನ
ಧರಣೀಗಣಿಕೆ ಯಶೌಘನ ವಿರಹದ ಪರಿತಾಪಮಂ ಯಶೋಧರ ಯಶೋ ಹರಿಚಂದನಚರ್ಜೆಯಿನು TLS ದಾನಾಸಾರಸೇಕದಿಂ ಮಗ್ಗಿಸಿದಳ್‌
--------------
ಜನ್ನ
ನೋಡುವ ಮಾತಾಡುವ ಬಾ ಯ್ಲೂಡುವ ಪದನಮೃತಮತಿಗೆ ಪೂರ್ವ ಸ್ಥಿತಿಯಂ ಪಾಡಟಲಿಯುತ್ತಿರೆ ನೋಡಲ್‌ ವೇಡಿ ಯಶೋಧರನದೊರ್ಮೆ ಶಯ್ಯಾತಳದೊಳ್‌
--------------
ಜನ್ನ
ಪರಿವಾರಮಂ ಪ್ರಧಾನರ- ನಿರಿಸಿ ಯಶೋಮತಿಗೆ ರಾಜ್ಯಮಂ ಕೊಟ್ಟು ಯಶೋ- ಧರನಿಂತು ತಪಕೆ ನಡೆಯ- ಲ್ಕಿರೆ ಮೃತ್ಯುವಿನಂತೆ ಅರಸಿ ಬಂದಿಂತೆಂದಳ್‌
--------------
ಜನ್ನ
ಪರೆವುದು ದುರಿತತಮಿಸ್ರಂ ಪೊರೆಯೇಜುದಮಳದೃಷ್ಟಿಕುವಳಯ ವನಮಾ- ಚರಿಪ ಜನಿಕ್ಕೆ ಯಶೋಧರ ಚರಿತ ಕಥಾಶ್ರವಣಮೆಂಂಬ ಚಂದ್ರೋದಯದೊಳ್‌
--------------
ಜನ್ನ
ಪೊಡೆಯೆ ಕೃಕವಾಕು ನಿನದಂ ಬಿಡದುಣ್ಮುತಿರಲ್ಕೆ ಕಯ್ಯ ಬಾಳ್‌ ಬೀಟೆರೆ ಪೊಯ್‌ ವಡೆದಂತೆ ಪಂದೆಯಂ ಪಾ- ವಡರ್ದಂತಾಗಿರೆ ಯಶೋಧರಂ ಬೆರಗಾದಂ
--------------
ಜನ್ನ
ಬೇಂಟೆಗೆ ನಡೆಯೆ ಯಶೋಮತಿ ಗೆಂಟಖೊಳಾರಣ್ಯವಾಸಿಗಳ್‌ ನಿಲೆ ಕಂಡಾ- ಬೇಂಟೆ ಪರಿಯದೊಡೆ ಬಿನದದ ಕಂಟಕನೀ ಸವಣನೆನುತೆ ಬರುತಂಂ ಮುನಿದಂ
--------------
ಜನ್ನ
ಮತ್ತಂ ಧರ್ಮವಿಹಾರ ನಿ- ಮಿತ್ತಂ ಬಂದಿರೆ ಯಶೋಧರಂ ತಮ್ಮವರ್ಗಾ ದುತ್ತಮಗತಿಯಂ ಕೇಳ್ಬು ಸು- ದತ್ತಾಚಾರ್ಯರ ಪದಾಬ್ಬಮಂ ಪೂಜಿಸಿದಂ
--------------
ಜನ್ನ
ಮಾಡಿದ ಕೋಚೆಯನಜೆದ- ರ್ಕಾಡಿ ಯಶೋಧರನುಂ ಚಂದ್ರಮತಿಯಿಂತಿರ್ಬರ್‌ ಗೂಡಿನ ಕೋಣಚೆಗಳಾದರ್‌ ನೋಡಯ್‌ ಮತ್ತೊರ್ಮೆ ಬಟಲಿ ತಿರ್ಯಗ್ಗತಿಯೊಳ್‌
--------------
ಜನ್ನ
ಮೀನಾಗಿ ಸಾಯುತಿರ್ದಪೆ- ನಾನೀ ಪಾರ್ವರ್‌ ಯಶೋಧರಂ ಸುಖದಿಂದಿ ರ್ಕಾ ನಾಕದೊಳೆಂದೂಳ್ಡಪ- ರೀ ನೃಪನುಂ ನಂಬಿದಪ್ಪನಕ್ಕಟ ಬಿದಿಯೇ
--------------
ಜನ್ನ
ರತಿವೆರಸು ಮನಸಿಜಂ ಬನ- ದತಿಶಯಮಂ ನೋಡಲೆಂದು ಬರ್ಪಂತೆ ಯಶೋ- ಮತಿ ಕುಸುಮಾವಳಿವೆರಸು- ನ್ನತಪೀತಚ್ಛತ್ರನಂದನಂ ನಡೆತಂದಂ
--------------
ಜನ್ನ
ಶ್ರೀ ರಮಣಿ ತೋರಮುತ್ತಿನ ಹಾರದೊಳೊಲೆದುಯ್ಯಲಾಡೆ ನಿತ್ಯವಸಂತಂ ಪೇರುರಮಾಗಿರೆ ತಾಳ್ವಿದ ಯಶೋಧರನ್ಯಪೇಂದ್ರ ನೀನಲ್ಲದವರ್‌
--------------
ಜನ್ನ
-->